ಸೋಮವಾರಪೇಟೆ, ಮಾ.30: ವಿಶ್ವ ಜಲ ದಿನಾಚರಣೆಯನ್ನು ಶಾಂತಳ್ಳಿಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಆಚರಿಸಲಾಯಿತು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಕೆ. ಪರಮೇಶ್‍ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. “ನೀರನ್ನು ಮಿತವಾಗಿ ಬಳಸುತ್ತೇವೆ ಹಾಗೂ ಜಲ ಮಾಲಿನ್ಯ ಮಾಡುವದಿಲ್ಲ” ಎಂಬ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.
ಅತಿಥಿಗಳಾಗಿ ಪಾಲ್ಗೊಂಡಿದ್ದ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಕೆ. ಮುತ್ತಣ್ಣ, ನಿವೃತ್ತ ಸೈನಿಕರಾದ ಕೆ.ಯು. ಸುಬ್ಬಯ್ಯ ಹಾಗೂ ಶಾಲಾಭಿವೃದ್ಧಿ ಸಮಿತಿ ಸದಸ್ಯರುಗಳು ನೂತನವಾಗಿ ನಿರ್ಮಿಸಲಾದ ಶಾಲಾ ಹೂದೋಟಕ್ಕೆ ತುಂತುರು ನೀರಾವರಿ ಹಾಗೂ ಶಾಲೆಯ ಮುಂಭಾಗ ನಿರ್ಮಿಸಿರುವ ಕಾರಂಜಿಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ವರ್ಗ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.