ವೀರಾಜಪೇಟೆ, ಮಾ.30: ವೀರಾಜಪೇಟೆ ಬಳಿಯ ಅಮ್ಮತ್ತಿ ಒಂಟಿಯಂಗಡಿಯ ಮುತ್ತಪ್ಪ ದೇವಸ್ಥಾನದಲ್ಲಿ ತಾ.1 ಹಾಗೂ 2ರಂದು ವರ್ಷಂಪ್ರತಿಯಂತೆ ಮುತ್ತಪ್ಪ ಉತ್ಸವವನ್ನು ಆಚರಿಸಲಾಗುವದು ಎಂದು ಆಡಳಿತ ಮಂಡಳಿಯ ಅಧ್ಯಕ್ಷ ಪಿ.ಎನ್. ಅಚ್ಯುತನ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಚ್ಯುತನ್ ಅವರು ತಾ.1ರಂದು ಬೆಳಗಿನ ಜಾವ 8ಗಂಟೆಗೆ ಧ್ವಜಾರೋಹಣ, ಅಪರಾಹ್ನ 3.30ಗಂಟೆಗೆ ಮುತ್ತಪ್ಪನನ್ನು ಮಲೆ ಇಳಿಸುವದು ರಾತ್ರಿ 7ಗಂಟೆಗೆ ಶಾಸ್ತಪ್ಪನ ವೆಳ್ಳಾಟಂ, ಗುಳಿಗನ ವೆಳ್ಳಾಟಂ, ಕಳಶ ತರುವದು ರಾತ್ರಿ 10ಗಂಟೆಗೆ ಅನ್ನದಾನ, ರಾತ್ರಿ 12 ಗಂಟೆಗೆ ವಸೂರಿಮಾಲ ಸ್ನಾನ ಪೂಜೆ ನಡೆಯಲಿದೆ.
ಸಮಿತಿಯ ಕಾರ್ಯದರ್ಶಿ ನಾರಾಯಣ ಮಾತನಾಡಿ ತಾ. 2 ರಂದು ಪ್ರಾತಃ ಕಾಲ 1 ಗಂಟೆಗೆ ಕಳಿಯಪಾಟ್ ಪ್ರಾತಃ ಕಾಲ 3ಗಂಟೆಗೆ ಗುಳಿಗನ ತೆರೆ, ಬೆಳಿಗ್ಗೆ 5 ಗಂಟೆಗೆ ಶಾಸ್ತಪ್ಪನ ತೆರೆ, ಬೆಳಿಗ್ಗೆ 6 ಗಂಟೆಗೆ ಮುತ್ತಪ್ಪನ ತಿರುವಪ್ಪನ ತೆರೆ, 11 ಗಂಟೆಗೆ ವಸೂರಿಮಾಲ ತೆರೆ ಅಪರಾಹ್ನ 1 ಗಂಟೆಗೆ ಅನ್ನದಾನ ಕಾರ್ಯಕ್ರಮವಿದೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಉಪಾಧ್ಯಕ್ಷ ಪ್ರಕಾಶ್, ಸುನಿಲ್ ಮತ್ತಿತರರು ಉಪಸ್ಥಿತರಿದ್ದರು.