ನಾಪೆÇೀಕ್ಲು, ಮಾ. 30: ರಾಜ್ಯ ಸರಕಾರ ಸ್ವಸಹಾಯ ಸಂಘಗಳ ಸಾಲಕ್ಕೆ ವಿಧಿಸಿದ ಶೇ. 4 ರೂ.ಗಳನ್ನು 13 ರೂ.ಗಳಿಗೆ ಏರಿಸಿರುವದನ್ನು ನಾಪೆÇೀಕ್ಲುವಿನ 34 ಸ್ವಸಹಾಯ ಸಂಘದ ಪದಾಧಿಕಾರಿಗಳು, ಸದಸ್ಯರು ವಿರೋಧಿಸಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪದಾಧಿಕಾರಿಗಳಾದ ಶಿವಚಾಳಿಯಂಡ ಜಗದೀಶ್, ಪಾಡಿಯಮ್ಮಂಡ ಮನು ಮಹೇಶ್, ಕಂಗಾಂಡ ಜಾಲಿ ಪೂವಪ್ಪ, ಕುಟ್ಟಂಜೆಟ್ಟಿರ ಪೂಣಚ್ಚ 2016-17ನೇ ಸಾಲಿನಲ್ಲಿ ಸರಕಾರ ವಿಧಿಸಿದ ಶೇ. 4 ರೂ. ಬಡ್ಡಿ ಮತ್ತು ಅಸಲನ್ನು ಪಾವತಿಸಲಾಗಿದೆ. ಆದರೆ ಈ ಬಾರಿಯ ಬಜೆಟ್‍ನಲ್ಲಿ ಸ್ವಸಹಾಯ ಸಂಘಗಳ ಬಡ್ಡಿ ದರವನ್ನು ಶೇ. 13ರೂ. ಗೆ ಏರಿಸಲಾಗಿದೆ. ಅದರೊಂದಿಗೆ ಕಳೆದ ಬಾರಿ ಪಾವತಿಸಿದ ಶೇ. 4 ರೂ. ಬಡ್ಡಿದರದ ಉಳಿದ 9 ರೂ. ಗಳನ್ನು ಪಾವತಿಸಲು ಆದೇಶಿಸಲಾಗಿದೆ. ಇವು ಯಾವ ರೀತಿಯ ನ್ಯಾಯ? ಎಂದು ಪ್ರಶ್ನಿಸಿದರು.
ಸ್ವಸಹಾಯ ಸಂಘದಲ್ಲಿ ಹಂದಿ ಸಾಕಣೆ, ಕೋಳಿ ಸಾಕಾಣೆ, ಪಶು ಪಾಲನೆ, ನರ್ಸರಿ ಮತ್ತಿತರ ಉದ್ದೇಶಗಳಿಗಾಗಿ ಬಡವರು ಸಾಲ ಪಡೆಯುತ್ತಿದ್ದಾರೆ. ಇವರು ಶೇ. 13 ರೂ. ಬಡ್ಡಿ ಪಾವತಿಸುವದಾದರೆ ಸ್ವಸಹಾಯ ಸಂಘದ ಅಗತ್ಯವೇನು? ಎಂದು ಪ್ರಶ್ನಿಸಿದ ಅವರು ಸಂಬಂಧಪಟ್ಟವರು ಕೂಡಲೇ ಈ ಬಗ್ಗೆ ಜಿಲ್ಲೆಯ ಸ್ವಸಹಾಯ ಸಂಘಗಳ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಸೂಕ್ತ ವಿವರಣೆ ನೀಡಿ ಸಮಸ್ಯೆ ಬಗೆಹರಿಸದಿದ್ದರೆ ಪ್ರತಿಭಟನೆ ನಡೆಸಲಾಗುವದು ಎಂದು ಎಚ್ಚರಿಸಿದ್ದಾರೆ.