ಸೋಮವಾರಪೇಟೆ,ಮಾ.30: ಪರಿಸರ ಮಿತ್ರ ಶಾಲಾ ಕಾರ್ಯಕ್ರಮದಡಿಯಲ್ಲಿ ನೀಡುವ “ಹಸಿರು ಶಾಲೆ” ಪ್ರಶಸ್ತಿಗೆ ಶಾಂತಳ್ಳಿಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಆಯ್ಕೆಯಾಗಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೊಡ ಮಾಡುವ “ಹಸಿರು ಶಾಲೆ” ಪ್ರಸಸ್ತಿ ಫಲಕದೊಂದಿಗೆ ರೂ. 5000 ನಗದನ್ನು ಶಾಲಾ ಮುಖ್ಯಸ್ಥರು ಸ್ವೀಕರಿಸಿದರು.