ಮಡಿಕೇರಿ, ಮಾ. 30: ಕೊಡಗಿನಲ್ಲಿ ಕಾವೇರಿ ನದಿ ನೀರನ್ನು ಕೃಷಿ ಚಟುವಟಿಕೆಗಳಿಗೆ ಜಿಲ್ಲಾಡಳಿತ ನಿಷೇಧಿಸಿರುವ ಕ್ರಮವನ್ನು ಕೊಡವ ನ್ಯಾಷನಲ್ ಕೌನ್ಸಲ್ ಅಧ್ಯಕ್ಷ ಎನ್.ಯು. ನಾಚಪ್ಪ ಆಕ್ಷೇಪಿಸಿದ್ದಾರೆ. ಬೇಸಿಗೆಯ ದಿನಗಳಲ್ಲಿ ಕಾಫಿ ತೋಟಗಳಿಗೆ ನೀರು ಹಾಯಿಸುವದು ಅನಿವಾರ್ಯ ವಾಗಿದ್ದು, ಈ ವೇಳೆ ಕುಡಿಯುವ ನೀರಿನ ಅಭಾವದ ಹೆಸರಿನಲ್ಲಿ ಬೆಳೆಗಾರರಿಗೆ ಕಿರುಕುಳ ನೀಡಲಾಗುತ್ತದೆ ಎಂದು ನಾಚಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ನಾಚಪ್ಪ ನದಿ ಪಾತ್ರದಿಂದ ಕಾವೇರಿ ನೀರನ್ನು ತೋಟಗಳಿಗೆ ಬಳಕೆ ಮಾಡದಂತೆ ನಿರ್ಬಂಧಿಸಿರುವ ಆಡಳಿತ, ಜಿಲ್ಲೆಯ ಜನತೆಗೆ ಕಾವೇರಿ ನೀರನ್ನು ಕುಡಿಯಲು ಒದಗಿಸ ಬೇಕೆಂದು ಪ್ರತಿಪಾದಿಸಿದ್ದಾರೆ.