ಮಡಿಕೇರಿ, ಮಾ. 30: ಪ್ರತಿಷ್ಠಿತ ಅಮ್ಮತ್ತಿ ಕೊಡವ ಸಮಾಜದ 2018-21ನೇ ಸಾಲಿನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷರಾದ ಮೂಕೋಂಡ ಬೋಸ್ ದೇವಯ್ಯ ಅವರು ಸತತ ಮೂರನೇ ಅವಧಿಗೆ ಆಯ್ಕೆಯಾಗಿದ್ದಾರೆ.

21.3.2018ರಂದು ನಡೆದ ಸಮಾಜದ ವಾರ್ಷಿಕ ಮಹಾಸಭೆಯಲ್ಲಿ ಹಾಲಿ ಪದಾಧಿಕಾರಿಗಳನ್ನೇ ಮುಂದುವರಿಸಲು ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು. ಇಂದು ಸಮಾಜದ ಹಿರಿಯ ಸದಸ್ಯ ಮೊಳ್ಳೆರ ಸದಾ ಅಪ್ಪಚ್ಚು ಅವರ ಅಧ್ಯಕ್ಷತೆಯಲ್ಲಿ ಆಡಳಿತ ಮಂಡಳಿ ಸಭೆ ನಡೆದಿದ್ದು, ಅಧ್ಯಕ್ಷರಾಗಿ ಮುಂದಿನ ಅವಧಿಗೂ ಬೋಸ್ ದೇವಯ್ಯ ಅವರನ್ನು ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಮೊಳ್ಳೆರ ಸದಾ ಅಪ್ಪಚ್ಚು, ಕಾರ್ಯದರ್ಶಿಯಾಗಿ ನೆಲ್ಲಮಕ್ಕಡ ಸಂಪತ್ ದೇವಯ್ಯ, ಖಜಾಂಜಿಯಾಗಿ ಕುಟ್ಟಂಡ ಬೋಜಿ ಅಯ್ಯಪ್ಪ, ಪದಾಧಿಕಾರಿಗಳಾಗಿ ಪಾಲಚಂಡ ಮನುಮುತ್ತಣ್ಣ, ಮಂಡೇಪಂಡ ಗಿರೀಶ್ ಉತ್ತಪ್ಪ, ಬಲ್ಟಿಕಾಳಂಡ ರವಿ ಮೇದಪ್ಪ, ಉದ್ದಪಂಡ ಎಂ. ಚಂಗಪ್ಪ, ಮಂಡೇಪಂಡ ಗೀತಾ ಮಂದಣ್ಣ, ಮಚ್ಚಾರಂಡ ಶಾಲಿ ಬೋಪಣ್ಣ ಅವರುಗಳು ಆಯ್ಕೆಯಾಗಿದ್ದಾರೆ. ಸಭೆಯಲ್ಲಿ ಸಮಾಜದ ವ್ಯವಸ್ಥಾಪಕ ಕುಂಞಂಡ ಎಂ. ದೇವಯ್ಯ, ಸಹಾಯಕ ವ್ಯವಸ್ಥಾಪಕ ಕುಟ್ಟಂಡ ಎ. ಅಪ್ಪಣ್ಣ ಉಪಸ್ಥಿತರಿದ್ದರು.

ಸಮಾಜದ ಏಳಿಗೆಯ ದೃಷ್ಟಿಯಿಂದ ಹಾಗೂ ಸಮಾಜಪರ ಕಾರ್ಯ ಚಟುವಟಿಕೆಗಳನ್ನು ಮುಂದುವರಿಸುವದಾಗಿ ನೂತನ ಅಧ್ಯಕ್ಷ ಬೋಸ್ ದೇವಯ್ಯ ತಿಳಿಸಿದ್ದಾರೆ.