ಸೋಮವಾರಪೇಟೆ, ಮಾ. 30: ಅಬ್ಬೂರುಕಟ್ಟೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಸಂತ ಲಾರೆನ್ಸ್ ದೇವಾಲಯಕ್ಕೆ ಏ. 2 ರಂದು ಸಂಜೆ 4 ಗಂಟೆಗೆ ಶಂಕುಸ್ಥಾಪನೆ ನೆರವೇರಲಿದೆ.ಮೈಸೂರು ಧರ್ಮಕ್ಷೇತ್ರದ ಧರ್ಮಗುರು ಡಾ. ಕೆ.ಎ. ವಿಲಿಯಂ ಶಂಕುಸ್ಥಾಪನೆ ನೆರವೇರಿಸಿ ಆಶೀರ್ವಚನ ನೀಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬ್ಬೂರುಕಟ್ಟೆ ಸಂತ ಲಾರೆನ್ಸ್ ದೇವಾಲಯದ ಸ್ವಾಮಿ ಜೋಸೆಫ್ ಅಲೆಕ್ಸಾಂಡರ್ ವಹಿಸಲಿದ್ದಾರೆ.

ಗುರುಗಳಾದ ಸಿ. ರಾಯಪ್ಪ ಹಾಗೂ ಸ್ವಾಮಿ ಮದಲೆಮುತ್ತು, ಶಾಸಕ ಅಪ್ಪಚ್ಚು ರಂಜನ್, ಜಿಲ್ಲಾ ಪಂಚಾಯಿತಿ ಸದಸ್ಯೆ ಪೂರ್ಣಿಮಾ ಗೋಪಾಲ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಹೆಚ್. ತಿಮ್ಮಯ್ಯ, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿ.ಎಂ. ವಿಜಯ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎಂ. ಡಿಸಿಲ್ವ, ಕೆ.ಎಂ. ಲೋಕೇಶ್, ನಿವೃತ್ತ ಕೆ.ಎ.ಎಸ್. ಅಧಿಕಾರಿ ವಿರುಪಾಕ್ಷಯ್ಯ, ಉದ್ಯಮಿಗಳಾದ ಹರಪಳ್ಳಿ ರವೀಂದ್ರ ಇತರರು ಭಾಗವಹಿಸಲಿದ್ದಾರೆ.