ಮಡಿಕೇರಿ, ಮಾ. 29: ಮಡಿಕೇರಿಯ ಸ್ಟಿವರ್ಟ್ ಹಿಲ್ ನಿವಾಸಿ ಶಕ್ತಿ ಖಾಸಗಿ ಬಸ್ ಮಾಲೀಕರಾಗಿದ್ದ ಬಾಳೆಯಡ ನಂದ ಪೂಣಚ್ಚ (51) ಅವರು ತಾ. 29 ರಂದು ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದು, ಅಂತ್ಯಕ್ರಿಯೆ ತಾ. 30 ರಂದು (ಇಂದು) ಅಪರಾಹ್ನ 12ಕ್ಕೆ ಮಡಿಕೇರಿ ಕೊಡವ ಸಮಾಜದ ರುದ್ರಭೂಮಿಯಲ್ಲಿ ನೆರವೇರಲಿದೆ. ಮೃತರು ಖಾಸಗಿ ಬಸ್ ಮಾಲೀಕರ ಸಂಘದ ಕಾರ್ಯದರ್ಶಿಯೂ ಆಗಿದ್ದರು.

ಸಂತಾಪ: ಶಕ್ತಿ ದಿನಪತ್ರಿಕೆಯ ಹಿತೈಷಿಯಾಗಿ, ಸಹಕಾರ ನೀಡುತ್ತಿದ್ದ ನಂದಾ ಅವರ ಅಕಾಲಿಕ ಮರಣಕ್ಕೆ ‘ಶಕ್ತಿ’ ಬಳಗ ಸಂತಾಪ ವ್ಯಕ್ತಪಡಿಸುತ್ತದೆ.