ನಾಪೆÇೀಕ್ಲು, ಮಾ. 29: ಏ. 1 ರಂದು ನಾಪೆÇೀಕ್ಲು ಕೊಡವ ಸಮಾಜದಲ್ಲಿ ಲಯನ್ಸ್ ಪ್ರಾಂತೀಯ ಅಧ್ಯಕ್ಷೆ ಕೇಟೋಳಿರ ರತ್ನ ಚರ್ಮಣ್ಣ ಅಧ್ಯಕ್ಷತೆಯಲ್ಲಿ ಲಯನ್ಸ್ ಪ್ರಾಂತೀಯ ಸಮ್ಮೇಳನ ನಡೆಯಲಿದೆ ಎಂದು ಪ್ರಾಂತೀಯ ಸಮ್ಮೇಳನ ಸಮಿತಿ ಅಧ್ಯಕ್ಷ ಡಾ. ಬೊಪ್ಪಂಡ ಜಾಲಿ ಬೋಪಯ್ಯ ತಿಳಿಸಿದರು.

ಈ ಬಗ್ಗೆ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರು ಸೆಂಟ್ ಎಗ್ನಸ್ ಕಾಲೇಜಿನ ಆಂಗ್ಲ ಭಾಷಾ ವಿಭಾಗದ ಡಾ. ಮಾಲಿನಿ ಹೆಬ್ಬಾರ್ ಭಾಗವಹಿಸಲಿರುವರು. ಅವರೊಂದಿಗೆ ಲಯನ್ಸ್ ಮಾಜಿ ರಾಜ್ಯಪಾಲ ಪಿ.ಎ.ಮುತ್ತಣ್ಣ, ಪ್ರಾಂತೀಯ ಸಮ್ಮೇಳನ ಸಮಿತಿ ಅಧ್ಯಕ್ಷ ಡಾ. ಬಿ.ಎಂ. ಬೋಪಯ್ಯ, ಮಾಜಿ ಪ್ರಾಂತೀಯ ಅಧ್ಯಕ್ಷರು, ಕಾರ್ಯದರ್ಶಿ ಕೆ.ಎಸ್. ಕುಟ್ಟಪ್ಪ, ಖಜಾಂಚಿ ಕೆ.ಪಿ. ಮುದ್ದಯ್ಯ, ನಾಪೆÇೀಕ್ಲು ಲಯನ್ಸ್ ಸಂಸ್ಥೆಯ ಅಧ್ಯಕ್ಷ ಡಾ. ಪಂಚಮ್ ತಿಮ್ಮಯ್ಯ, ಕಾರ್ಯದರ್ಶಿ ಎಂ.ಎಂ. ವಿನಯ್, ಖಜಾಂಚಿ ರೇಷ್ಮಾ ಉತ್ತಪ್ಪ, ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಸಮ್ಮೇಳನದಲ್ಲಿ ಕೊಡಗು ಜಿಲ್ಲೆಯ 11 ಲಯನ್ಸ್ ಸಂಸ್ಥೆಗಳಲ್ಲದೆ ದಕ್ಷಿಣ ಕನ್ನಡ, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಂದ ಲಯನ್ಸ್ ಸಂಸ್ಥೆಯ ಸದಸ್ಯರುಗಳು ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ನಾಪೆÇೀಕ್ಲು ಲಯನ್ಸ್ ಸಂಸ್ಥೆಯು 1984ರಲ್ಲಿ ಸ್ಥಾಪನೆಯಾದಲ್ಲಿಂದ ಇಲ್ಲಿಯವರೆಗೆ ಉಚಿತ ಆರೋಗ್ಯ ಶಿಬಿರ, ದಂತ ಚಿಕಿತ್ಸೆ, ಕಣ್ಣು ತಪಾಸಣಾ ಶಿಬಿರ, ರಕ್ತದಾನ ಶಿಬಿರ, ಸೇರಿದಂತೆ ಹಲವಾರು ಸಮಾಜಮುಖಿ ಕೆಲಸಗಳನ್ನು ನಡೆಸಿಕೊಂಡು ಬರಲಾಗಿದೆ. ಸಮ್ಮೇಳನ ಅಧ್ಯಕ್ಷೆ ರತ್ನಾ ಚರ್ಮಣ್ಣ “ಪರಿವರ್ತನ್” ಎಂಬ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಲಯನ್ಸ್ ಪ್ರಾಂತೀಯ ಅಧ್ಯಕ್ಷೆ ಕೇಟೋಳಿರ ರತ್ನಾ ಚರ್ಮಣ್ಣ, ನಾಪೆÇೀಕ್ಲು ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಪಂಚಮ್ ತಿಮ್ಮಯ್ಯ, ಸಮ್ಮೇಳನದ ಮುಖ್ಯ ಕಾರ್ಯದರ್ಶಿ ಕೆ.ಎಸ್. ಕುಟ್ಟಪ್ಪ, ಖಜಾಂಚಿ ಕೆ.ಪಿ. ಮುದ್ದಯ್ಯ, ಚೌರೀರ ಉದಯ, ರೇಷ್ಮಾ ಉತ್ತಯ್ಯ ಇದ್ದರು.