ಕುಶಾಲನಗರ, ಮಾ. 29: ವಿದ್ಯಾರ್ಥಿಗಳು ಸರಳತೆ, ಸಜ್ಜನಿಕೆಯನ್ನು ಬೆಳೆಸಿಕೊಂಡಲ್ಲಿ ಉತ್ತಮ ನಾಗರಿಕರಾಗಲು ಸಾಧ್ಯ ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಕೆ.ವಿ. ಸುರೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ಸ್ಥಳೀಯ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ 2017-18ನೇ ಸಾಲಿನ ವಿದ್ಯಾರ್ಥಿ-ಕ್ರೀಡಾ ಸಂಘ ಹಾಗೂ ಎನ್.ಎಸ್.ಎಸ್. ಘಟಕಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಇಂದಿನ ತಂತ್ರಜ್ಞಾನದ ಯುಗದಲ್ಲಿ ವಿದ್ಯಾರ್ಥಿಗಳಲ್ಲಿ ಸಂಸ್ಕøತಿ, ಸಂಯಮದ ಕೊರತೆ ಎದ್ದು ಕಾಣುತ್ತಿದೆ. ಯಾಂತ್ರಿಕತೆಯ ವಾತಾ ವರಣದಲ್ಲಿ ಜೀವನ ಸಾಗಿಸುತ್ತಿರುವದು ಅತ್ಯಂತ ಆತಂಕಕಾರಿಯಾಗಿದ್ದು, ಕಿರಿಯರು-ಹಿರಿಯರ ಜೀವನಾನುಭವದ ಉಪದೇಶಗಳಿಗೆ ಮನ್ನಣೆ ನೀಡುವಂತೆ ಕಿವಿಮಾತು ಹೇಳಿದರು.

ಕಾಲೇಜು ಪ್ರಾಂಶುಪಾಲ ಹೆಚ್.ಕೆ. ಕೆಂಪೇಗೌಡ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಗಳಾಗಿ ಬೆಂಗಳೂರಿನ ಸಹಾಯಕ ಕಾರ್ಯಪಾಲಕ ಅಭಿಯಂತರ ತುಕಾರಾಮ್ ಉರನ್‍ಕರ್, ವಿಶ್ರಾಂತ ಪ್ರಾಂಶುಪಾಲ ಹೆಚ್.ವಿ. ಶಿವಪ್ಪ, ಉಪನ್ಯಾಸಕ ಕುಮಾರ್, ವಿದ್ಯಾರ್ಥಿ ಸಮಿತಿ ಅಧ್ಯಕ್ಷ ಹೆಚ್.ಬಿ. ಆಕಾಶ್, ವಿದ್ಯಾರ್ಥಿನಿ ಪ್ರತಿನಿಧಿಗಳಾದ ಆಶ್ರಿತ, ಧನ್ಯಶ್ರೀ ಇದ್ದರು.

ವಿದ್ಯಾರ್ಥಿಗಳಾದ ಸೋನು ಮತ್ತು ಸುರೇಂದ್ರ ಪ್ರಾರ್ಥಿಸಿದರು, ಅಂಜು ಮತ್ತು ದೀಪಿಕಾ ನಿರೂಪಿಸಿದರು, ಸುನೇಹ ಸ್ವಾಗತಿಸಿದರು, ಪವನ್ ವಂದಿಸಿದರು.