ವೀರಾಜಪೇಟೆ, ಮಾ. 29: ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ವತಿಯಿಂದ ಕಾಲೇಜು ಸಭಾಂಗಣದಲ್ಲಿ ‘ಭಾರತದ ಇತಿಹಾಸದಲ್ಲಿ ಅಂಚೆ ಇಲಾಖೆಯ ಚರಿತ್ರ ಕಥನ’ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಕೆ. ಚೆಟ್ಟಳ್ಳಿಯ ಬ್ರಾಂಚ್ ಪೋಸ್ಟ್ ಮಾಸ್ಟರ್ ಬಿ.ಎಸ್. ಮೋಹನ್ ಕುಮಾರ್ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಭಾರತದ ಅಂಚೆ ಇಲಾಖೆಯ ಇತಿಹಾಸ ಹಾಗೂ ಅಂಚೆ ಇಲಾಖೆಯಲ್ಲಿ ಸರಕಾರದ ಯೋಜನೆಗಳ ಬಗ್ಗೆ ಉಪನ್ಯಾಸ ನೀಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಕೆ. ಬೋಪಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅಂಚೆ ಇಲಾಖೆ ನಡೆದು ಬಂದ ದಾರಿಯ ಬಗ್ಗೆ ವಿವರ ನೀಡಿದರು. ಅಂಚೆ ಇಲಾಖೆಯ ಕೆ.ಎಂ. ಹಂಸ ಏರ್ಪಡಿಸಲಾಗಿದ್ದ ಪ್ರಪಂಚದ ವಿವಿದ ದೇಶಗಳ ಸಂಗ್ರಾಹಿತ ನಾಣ್ಯ ಮತ್ತು ಅಂಚೆ ಚೀಟಿಗಳ ಬಗ್ಗೆ ಪ್ರದರ್ಶನ ನೀಡಲಾಯಿತು. ಕಾರ್ಯಕ್ರಮದಲ್ಲಿ ಇತಿಹಾಸ ಮುಖ್ಯಸ್ಥ ಪ್ರೊ. ರುದ್ರ, ಇತಿಹಾಸ ಉಪನ್ಯಾಸಕರಾದ ಎ.ಎಸ್. ಸತೀಶ್ ಕುಮಾರ್, ಚೈತ್ರ ಮುಂತಾದವರು ಉಪಸ್ಥಿತರಿದ್ದರು.