ಶನಿವಾರಸಂತೆ, ಮಾ. 28: ಸಮೀಪದ ಮೆಣಸ ಗ್ರಾಮದ ಮನೆಹಳ್ಳಿ ಶ್ರೀಕ್ಷೇತ್ರ ತಪೋವನದ ಶ್ರೀ ಗುರುಸಿದ್ದವೀರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ತಾ. 31ರಿಂದ ಏ.2ರವರೆಗೆ 3 ದಿನಗಳ ಕಾಲ ನಡೆಯಲಿದೆ.ತಾ. 31ರ ಬೆಳಿಗ್ಗೆ 8 ಗಂಟೆಗೆ ಧ್ವಜಾರೋಹಣ, ಸಂಜೆ 6.30 ಗಂಟೆಗೆ ಶ್ರೀಸ್ವಾಮಿಯವರಿಗೆ ಕಂಕಣ ಧಾರಣೆ, ಮಹಾಮಂಗಳಾರತಿ.

ಏ.1ರಂದು ಬೆಳಿಗ್ಗೆ 8 ಗಂಟೆಗೆ ಶ್ರೀ ಮಧನಾದಿ ಅನಘ ನಿರಂಜನ ಜಂಗಮ ಪೂಜೆ, ಸಂಜೆ 6.30 ಗಂಟೆಗೆ ಶ್ರೀ ಸ್ವಾಮಿಯವರ ‘ಸೂರ್ಯ ಮಂಡಲೋತ್ಸವ' ರಾತ್ರಿ 8.30ಕ್ಕೆ ದಾಸೋಹ, ಏ.2ರಂದು ಬೆಳಿಗ್ಗೆ 5 ಗಂಟೆಗೆ ಶ್ರೀಕ್ಷೇತ್ರನಾಥ ವೀರಭದ್ರೇಶ್ವರ ಸ್ವಾಮಿಯವರ ಪ್ರೀತ್ಯರ್ಥ ‘ದುಗ್ಗಳ’ ಹಾಗೂ ಅಗ್ನಿಕೊಂಡೋತ್ಸವ ಸೇವೆ, 7 ಗಂಟೆಗೆ ಸ್ವಾಮಿಯವರ ಸಣ್ಣ ಚಂದ್ರಮಂಡಲೋತ್ಸವ, 9 ಗಂಟೆಗೆ ಸ್ವಾಮಿಯವರ ಅಡ್ಡಪಲ್ಲಕ್ಕಿ ಉತ್ಸವ, 11 ಗಂಟೆಗೆ ಮುತೈದೆ ಸೇವೆ ಹಾಗೂ ಸುಮಂಗಲಿಯರಿಗೆ ಮಡಿಲು ತುಂಬುವ ಕಾರ್ಯಕ್ರಮ. ಮಧ್ಯಾಹ್ನ 12 ಗಂಟೆಗೆ ದಾಸೋಹ ಸೇವೆ. 1 ಗಂಟೆಗೆ ಸ್ವಾಮಿಯವರ ದೊಡ್ಡ ಚಂದ್ರಮಂಡಲೋತ್ಸವ, ಸಂಜೆ 5.30 ಗಂಟೆಗೆ ಸ್ವಾಮಿಯವರ ಪ್ರಕಾರ ಪಲ್ಲಕ್ಕಿ ಉತ್ಸವದೊಂದಿಗೆ ಸ್ವಾಮಿಯವರ ರಥೋತ್ಸವ, ಸಂಜೆ 6 ಗಂಟೆಗೆ ರಥಾರೂಢ ಸ್ವಾಮಿಯವರಿಗೆ ಚೆಲುವರಾಯಸ್ವಾಮಿಯವರಿಂದ ಚಾಮರಸೇವೆ, ಮಹಾಮಂಗಳಾರತಿ, 6.30ಕ್ಕೆ ಸ್ವಾಮಿಯವರ ಮಹಾರಥೋತ್ಸವ. ರಾತ್ರಿ 8 ಗಂಟೆಗೆ ಶ್ರೀವೃಷಭಲಿಂಗೇಶ್ವರ ಸ್ವಾಮಿಯ ಸಾನ್ನಿಧ್ಯದಲ್ಲಿ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಲಿದೆ.