ಸೋಮವಾರಪೇಟೆ, ಮಾ.28: ಕಳೆದ 2010ರಲ್ಲಿ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಎಂಟು ವರ್ಷದ ಬಳಿಕ ಸೋಮವಾರಪೇಟೆ ಪೊಲೀಸರು ಬಂಧಿಸಿದ್ದಾರೆ.

ಐಗೂರು ಗ್ರಾಪಂ ವ್ಯಾಪ್ತಿಯ ಯಡವಾರೆ ಸಜ್ಜಳ್ಳಿಯ ಜೇನು ಕುರುಬರ ರಾಜ(38) ಎಂಬಾತ ಅದೇ ಗ್ರಾಮದ ನಾಗರಾಜ, ಮುತ್ತಣ್ಣ, ಕರಿಯಪ್ಪ ಎಂಬವರುಗಳೊಂದಿಗೆ ಸೇರಿಕೊಂಡು ಕಾಳ ಅವರ ಪುತ್ರ ಗಣೇಶ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು.

ಘಟನೆಯ ನಂತರ ತಲೆಮರೆಸಿಕೊಂಡಿದ್ದ ರಾಜಾ, ಕಿರಗಂದೂರು ಗ್ರಾಮದಲ್ಲಿರುವ ಬಗ್ಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಇಲ್ಲಿನ ಠಾಣಾಧಿಕಾರಿ ಶಿವಣ್ಣ ಮತ್ತು ಸಿಬ್ಬಂದಿಗಳು ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಧೀಶರ ಎದುರು ಹಾಜರುಪಡಿಸಿದ ಮೇರೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.