ಚೆಟ್ಟಳ್ಳಿ, ಮಾ. 27: ಚೆಟ್ಟಳ್ಳಿಯ ಪಶು ವೈದ್ಯಾಸ್ಪತ್ರೆಯಲ್ಲಿ ವಾಲ್ನೂರು-ತ್ಯಾಗತೂರು ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತ ಮಂಜುನಾಥ್ ಪರಿಶಿಷ್ಟ ಜಾತಿ ಹಾಗೂ ಪಂಗಡದ ಫಲಾನು ಭವಿಗಳಿಗೆ ಉಚಿತ ಹಾಗೂ ಸಾಮಾನ್ಯ ವರ್ಗದವರಿಗೆ ರಿಯಾ ಯಿತಿ ದರದಲ್ಲಿ ಕೋಳಿ ಮರಿಯನ್ನು ತಾ. 21 ರಂದು ವಿತರಿಸಿದರು.

ಪಶು ಭಾಗ್ಯದಡಿ ಹಸು ಸಾಕಾಣಿಕೆಗೆ, ಅಮೃತ ಭಾಗ್ಯದಡಿ ಮೇಕೆ ಸಾಕಾಣಿಕೆಗೆ ಜಿಲ್ಲಾ ಪಂಚಾಯಿತಿಯಿಂದ ಸಾಲ ನೀಡಲಾಗಿದ್ದು, ವಿಶೇಷ ಘಟಕ ಯೋಜನೆಯಡಿ ತಾಲೂಕು ಪಂಚಾಯಿತಿ ವತಿಯಿಂದ ಮೇಕೆ ಸಾಕಾಣಿಕೆಗೆ ಸಾಲ ನೀಡಲಾಗಿದೆ ಎಂದು ಸುನಿತ ಮಂಜುನಾಥ್ ತಿಳಿಸಿದರು.

ಪಶು ವೈದ್ಯಾಧಿಕಾರಿ ಸಂಜೀವ ಆರ್. ಸಿಂಧೆ, ಜಿಲ್ಲಾ ಕಾಂಗ್ರೆಸ್ ವಕ್ತಾರ ಪುತ್ತರಿರ ಪಪ್ಪು ತಿಮ್ಮಯ್ಯ, ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮುಳ್ಳಂಡ ಸನ್ನಿ ಅಯ್ಯಪ್ಪ, ಗ್ರಾಮಸ್ಥ ಬೊಪ್ಪಟಿರ ಅಪ್ಪುಟ್ಟ ನಾಣಯ್ಯ, ಸ್ಥಳೀಯ ಫಲಾನುಭವಿಗಳು ಹಾಜರಿದ್ದರು.