ಮಡಿಕೇರಿ, ಮಾ.27 : ಕೊಡವ ಐರಿ ಕುಟುಂಬಗಳ ನಡುವಿನ ಏಳನೇ ವರ್ಷದ ಕ್ರಿಕೆಟ್ ಪಂದ್ಯಾವಳಿಯ ಆತಿಥ್ಯವನ್ನು ಮರಗೋಡಿನ ಐಮಂಡ ಕುಟುಂಬಸ್ಥರು ವಹಿಸಿಕೊಂಡಿದ್ದು, ಐಮಂಡ ಕಪ್ ಕ್ರಿಕೆಟ್ ಏ.20 ರಿಂದ 22 ರವರೆಗೆ ಮೂರ್ನಾಡಿನ ಬಾಚೆಟ್ಟಿರ ಲಾಲೂ ಮುದ್ದಯ್ಯ ಕ್ರಿಡಾಂಗಣದಲ್ಲಿ ನಡೆಯಲಿದೆ.
(ಮೊದಲ ಪುಟದಿಂದ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ರಿಕೆಟ್ ಉತ್ಸವದ ಸಲಹಾ ಸಮಿತಿ ಸದಸ್ಯ ಶಬರಿ ನಾಚಪ್ಪ, ಈ ಬಾರಿಯ ಕ್ರಿಕೆಟ್ ಪಂದ್ಯಾವಳಿಯ ಜೊತೆಗೆ ಮಹಿಳೆಯರಿಗೆ ಪ್ರಪ್ರಥಮ ಬಾರಿಗೆ ಹಗ್ಗ ಜಗ್ಗಾಟ ಸ್ಪರ್ಧೆಯನ್ನೂ ಆಯೋಜಿಸಲಾಗಿದೆ. ಜೊತೆಗೆ ಐಮಂಡ ಕುಟುಂಬಸ್ಥರಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು, ಕೊಡವ ಮೂಲ ನಿವಾಸಿಗಳ 'ಉರ್‍ಟಿಕೊಟ್ಟಾಟ್' ಸಾಂಸ್ಕøತಿಕ ಕಾರ್ಯಕ್ರಮವನ್ನು ಕೆದಮುಳ್ಳೂರು ಗ್ರಾಮದ ಕುಡಿಯರ ಶಾರದ ಮತ್ತು ತಂಡ ನಡೆಸಿಕೊಡಲಿದೆ ಎಂದು ತಿಳಿಸಿದರು.
ಇದೇ ಸಂದರ್ಭ ಕೊಡವ ಸಾಹಿತ್ಯ ಅಕಾಡೆಮಿ ಪ್ರೋತ್ಸಾಹ ದೊಂದಿಗೆ ಉಮ್ಮತ್ತಾಟ್ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ. ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದ ಐಮಂಡ ರೂಪೇಶ್ ನಾಣಯ್ಯ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಹಾಗೂ ಗೊಂಬೆ ಕಲಾವಿದ ಐಮಂಡ ದಿವಂಗತ ಬಾಬಣ್ಣ ಅವರ ಪುತ್ಥಳಿ ಗೊಂಬೆಗಳ ವಿಶೇಷ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮgಗೋಡಿನ ಹಿರಿಯ ನಾಟಿ ವೈದ್ಯೆ ಐಮಂಡ ಕಾಮವ್ವ ಗಣಪತಿ ಹಾಗೂ ಸಾಧಕ ಕ್ರೀಡಾಪಟು ಬಲ್ಲಮಾವಟಿ ಗ್ರಾಮದ ಐರೀರ ಬೋಪಯ್ಯ ಅವರನ್ನು ಸನ್ಮಾನಿಸಲಾಗುತ್ತದೆ. ಜೊತೆಗೆ ಐಮಂಡ ಕುಟುಂಬದಿಂದ ವಿವಾಹವಾಗಿ ತೆರಳಿರುವ ಸುಮಾರು 54 ತವರುಮನೆ ಸ್ತ್ರೀಯರನ್ನು ಕೂಡ ಒಂದೇ ವೇದಿಕೆಯಲ್ಲಿ ಸನ್ಮಾನಿಸಲಾಗುತ್ತದೆ ಎಂದು ತಿಳಿಸಿದರು.
ಪಂದ್ಯಾವಳಿ ಸಲಹಾ ಸಮಿತಿ ಸದಸ್ಯ ಧನಂಜಯ್ ಮಾತನಾಡಿ, ಪಂದ್ಯಾವಳಿಯ ಮೊದಲ ದಿನ ಬೆಳಿಗ್ಗೆ ಮೂರ್ನಾಡು ಪಟ್ಟಣದಲ್ಲಿ ಸಾಂಸ್ಕøತಿಕ ಮೆರವಣಿಗೆ ನಡೆಯಲಿದೆ. ಕ್ರಿಕೆಟ್ ಪಂದ್ಯಾಟದಲ್ಲಿ ಈ ಬಾರಿ ಸುಮಾರು 25 ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಏ.8ರವರೆಗೆ ನೋಂದಣಿ
ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಕೊಡವ ಐರಿ ಕುಟುಂಬದ ತಂಡಗಳಿಂದ ಪ್ರವೇಶಗಳನ್ನು ಆಹ್ವಾನಿಸಲಾಗಿದ್ದು, ಏಪ್ರಿಲ್ 8ರ ಒಳಗೆ ಹೆಸರು ನೋಂದಾಯಿಸಿಕೊಳ್ಳುವಂತೆ ಕೋರಿದ ಅವರು, ಐಮಂಡ ಕಪ್ ಕ್ರಿಕೆಟ್ ನಮ್ಮೆ-2018 ರ ಪ್ರಚಾರ ಸಮಿತಿ ಸದಸ್ಯ ಐಮಂಡ ರೂಪೇಶ್ ನಾಣಯ್ಯ, ದೂ 9900603872 ಹಾಗೂ ಐಮಂಡ ಗೋಪಾಲ್ ಸೋಮಯ್ಯ, ದೂ-8197602051 ಅಥವಾ ಚಿimಚಿಟಿಜಚಿಛಿuಠಿ@gmಚಿiಟ.ಛಿom ಮೂಲಕ ಹೆಸರು ನೋಂದಾವಣೆ ಮಾಡಿಕೊಳ್ಳಬಹುದೆಂದರು.
ಪಂದ್ಯಾವಳಿ ಪ್ರಚಾರ ಸಮಿತಿ ಸದಸ್ಯ ಗೋಪಾಲ್ ಸೋಮಯ್ಯ ಮಾತನಾಡಿ, ಕುಟುಂಬ ಸದಸ್ಯರು ಕಡಿಮೆ ಇದ್ದಲ್ಲಿ ಐರಿ ಜನಾಂಗದ ಇತರ ಕುಟುಂಬಗಳ ಜೊತೆಗೂಡಿ ತಂಡ ರಚಿಸಲು ಅವಕಾಶವಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪಂದ್ಯಾವಳಿ ಸಲಹಾ ಸಮಿತಿ ಸದಸ್ಯರುಗಳಾದ ಪೊನ್ನಪ್ಪ, ಕಾರ್ಯಪ್ಪ ಹಾಗೂ ರೂಪೇಶ್ ನಾಣಯ್ಯ ಉಪಸ್ಥಿತರಿದ್ದರು.