ಮಡಿಕೇರಿ, ಮಾ. 27: ಜಿಲ್ಲೆಯ ಪ್ರವಾಸಿತಾಣ ದುಬಾರೆ ಸೇರಿದಂತೆ ಇತರ ನದಿ ಪ್ರದೇಶಗಳಲ್ಲಿ ರ್ಯಾಫ್ಟಿಂಗ್ ಚಟುವಟಿಕೆಗೆ ಹೇರಲಾಗಿದ್ದ ನಿಷೇಧವನ್ನು ಮುಂದಿನ ಒಂದು ತಿಂಗಳವರೆಗೆ ಮುಂದುವರಿಸಿ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ಆದೇಶ ಹೊರಡಿಸಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆ ನಡೆಸಲಾಗಿದ್ದು, 30 ಮಂದಿ ಪ್ರತಿವಾದಿಗಳು ಹಾಜರಾಗಿ ದಾಖಲಾತಿ ಸಲ್ಲಿಸಿದ್ದರೂ ಅದರಲ್ಲಿ ಏಕರೂಪತೆ ಇಲ್ಲದಿರುವದರಿಂದ ಅಲ್ಲದೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೈರುಹಾಜರಾಗಿರುವದರಿಂದ ಅಧಿಕಾರಿಗಳ ವರದಿ ಪಡೆಯದೆ ಅಂತಿಮ ತೀರ್ಮಾನ ಕೈಗೊಳ್ಳುವದು ಸಾಧ್ಯವಾಗದ ಹಿನ್ನೆಲೆಯಲ್ಲಿ ನಿಷೇಧಾಜ್ಞೆಯನ್ನು ಏ. 28ರವರೆಗೆ ಮುಂದೂಡಲಾಗಿದೆ.ಮುಂದಿನ ವಿಚಾರಣೆಯನ್ನುಏ. 16ರಂದು ಮಧ್ಯಾಹ್ನ 3 ಗಂಟೆಗೆ ನಿಗದಿಪಡಿಸಿರುವದಾಗಿ ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.