ಮಡಿಕೇರಿ, ಮಾ. 27: ಪೆರಾಜೆ ಶ್ರೀ ಶಾಸ್ತಾವು ದೇವರ ವಾರ್ಷಿಕೋತ್ಸವ ಈಗಾಗಲೇ ಆರಂಭಗೊಂಡಿದ್ದು, ಏ. 10 ರವರೆಗೆ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ನಡೆಯಲಿದೆ.

ತಾ. 28 ರಂದು (ಇಂದು) ಈಶ್ವರನ್ ಬೆಳ್ಳಾಟ ಮತ್ತು ತುಳುಕೋಲ ತಿರುವಪ್ಪಗಳು ನಡೆಯಲಿದೆ. ತಾ. 29 ರಂದು ಬೇಟೆ ಕರಿಮಗನ್ ದೈವಗಳ ಬೆಳ್ಳಾಟ್‍ಗಳು ನಡೆಯಲಿದೆ. ಏ. 5 ರಂದು ಶ್ರೀ ಸತ್ಯ ನಾರಾಯಣ ಪೂಜೆ ಹಾಗೂ ಕೋಲಗಳು ನಡೆಯಲಿವೆ ಎಂದು ದೇವಸ್ಥಾನದ ಮೊಕ್ತೇಸರ ವಿಶ್ವನಾಥ್ ಕುಂಬಳಚೇರಿ ತಿಳಿಸಿದ್ದಾರೆ.