ಕುಶಾಲನಗರ, ಮಾ. 27: ಗುಡ್ಡೆಹೊಸೂರು ಹಿತರಕ್ಷಣಾ ಯೂತ್ ಕ್ಲಬ್ ಆಶ್ರಯದಲ್ಲಿ ತಾ. 30 ರಿಂದ 3 ದಿನಗಳ ಕಾಲ ಮುಕ್ತ ವಾಲಿಬಾಲ್ ಮತ್ತು ಥ್ರೋಬಾಲ್ ಪಂದ್ಯಾಟಗಳು ನಡೆಯಲಿವೆ. ಯೂತ್ ಟ್ರೋಫಿ-2018 ರ ಅಂಗವಾಗಿ ಸ್ಥಳೀಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ಪಂದ್ಯಾಟ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಬಿ.ಎನ್. ಶಶಿಕುಮಾರ್ ತಿಳಿಸಿದ್ದಾರೆ