ಸುಂಟಿಕೊಪ್ಪ, ಮಾ. 26: ಸರಕಾರ ಮಹಾಪುರುಷರ ಜಯಂತಿ ದಿನ ಮದ್ಯ ಮಾಂಸ ಮಾರಾಟ ನಿಷೇಧಿಸಬೇಕೆಂದು ಷರತ್ತು ಹಾಕಿ ವ್ಯಾಪಾರ ವಹಿವಾಟಿಗೆ ಪರವಾನಗಿ ನೀಡುತ್ತದೆ. ಜಿಲ್ಲೆಯ ಸ್ಥಳೀಯ ಆಡಳಿತವಾದ ನಗರಸಭೆ, ಪಟ್ಟಣ ಪಂಚಾಯಿತಿ. ಗ್ರಾ.ಪಂ.ಗಳಿಗೆ ಈ ಷರತ್ತು ಅನ್ವಯವಾಗುತದೆ.

ತಾ 25ರಂದು ರಾಮನವಮಿ ದಿನ ಮೀನು ಮಾಂಸ ಮಾರಾಟಕ್ಕೆ ಅವಕಾಶ ಇರುವದಿಲ್ಲ ಎಂದು ಗ್ರಾಮ ಪಂಚಾಯಿತಿಯಿಂದ ಮೀನು ಮಾಂಸ ಕೋಳಿ ಕುರಿ ಹಂದಿ ಮಳಿಗೆ ಹರಾಜು ಪಡೆದವರಿಗೆ ಪರವಾನಗೆಯಲ್ಲಿ ನಿಬಂಧನೆ ಹಾಕಿ ಕೊಡಲಾಗಿದ್ದರೂ ಆದರೆ ಸುಂಟಿಕೊಪ್ಪದಲ್ಲಿ ಗ್ರಾಮ ಪಂಚಾಯಿತಿ ಪರವಾನಗಿ ಪಡೆದ ಹಕ್ಕುದಾರರು ಕಾನೂನು ಉಲ್ಲಂಘಿಸಿ ಎಂದಿನಂತೆ ವ್ಯಾಪಾರ ನಡೆಸುತ್ತಿದೆ ಎಂದು ನಾಗರೀಕ ಹೋರಾಟ ಸಮಿತಿ ಅದ್ಯಕ್ಷ ರಾಜನ್ ಜಿ. ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಈ ಬಗ್ಗೆ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಪಿಡಿಓ ಮೇದಪ್ಪ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಈ ಮೊದಲೇ ರಾಮನವಮಿಯಂದು ಮೀನು ಮಾಂಸ ಕೋಳಿ ಕುರಿ ಹಂದಿ ಮಾರಾಟ ಮಾಡಬಾರದೆಂದು ಪಂಚಾಯಿತಿ ಪರವಾನಗಿ ಪಡೆದ ವ್ಯಾಪಾರಸ್ಥರಿಗೆ ನೊಟೀಸು ನೀಡಲಾಗಿದೆ. ಅದನ್ನು ಉಲ್ಲಂಘಿಸಿದಕ್ಕಾಗಿ ಪಂಚಾಯತ್ ರಾಜ್ ಕಾಯ್ದೆಯ ಗ್ರಾಮ ಸ್ವರಾಜ್ ನಿಯಮದ ಪ್ರಕಾರ ಕ್ರಮ ಕೈಗೊಳ್ಳಲಾಗುವದೆಂದು ತಿಳಿಸಿದರು ಈ ಬಗ್ಗೆ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅದ್ಯಕ್ಷರಾದ ರೋಸ್‍ಮೇರಿ ರಾಡ್ರಿಗಸ್ ಅವರಿಂದ ಮಾಹಿತಿ ಬಯಸಿದಾಗ ಅವರು ಉತ್ತರ ನೀಡಲು ಮೌನ ವಹಿಸಿರುವದಾಗಿ ನಾಗರೀಕ ಹೋರಾಟ ಸಮಿತಿ ಅಧÀ್ಯಕ್ಷ ರಾಜನ್ ಜಿ. ತಿಳಿಸಿದ್ದಾರೆ.