ಗೋಣಿಕೊಪ್ಪ ವರದಿ, ಮಾ. 26: ಇಲ್ಲಿನ ಕಾವೇರಿ ಕಾಲೇಜು ಮತ್ತು ಕಾವೇರಿ ಪಾಲಿಟೆಕ್ನಿಕ್ ವತಿಯಿಂದ “ಕಸದಿಂದ ರಸ ಜೈವಿಕ ಗೊಬ್ಬರ ಘಟಕ” ವನ್ನು ಕಾವೇರಿ ಕಾಲೇಜು ಆವರಣದಲ್ಲಿ ಸ್ಥಾಪಿಸಲಾಯಿತು.

ಕಾವೇರಿ ವಸತಿ ನಿಲಯದ ವ್ಯವಸ್ಥಾಪಕ ಮಿನ್ನಂಡ ಜೋಯಪ್ಪನವರ ಮೇಲ್ವಿಚಾರಣೆಯಲಿ ಘಟಕಕ್ಕೆ ಚಾಲನೆ ನೀಡಲಾಯಿತು. ನಂತರ ಮಾತನಾಡಿದ ಅವರು ವಸತಿ ನಿಲಯಗಳ ತಾಜ್ಯ ವಸ್ತುಗಳನ್ನು ಬಳಸಿಕೊಂಡು ಜೈವಿಕ ಗೊಬ್ಬರ ತಯಾರಿಸಲಾಗುವದು. ಕಾಲೇಜು ಆವರಣದಲ್ಲಿರುವ ಉದ್ಯಾನವನ ಹಾಗೂ ಗಿಡಗಳಿಗೆ ಗೊಬ್ಬರವನ್ನು ಬಳಸಿಕೊಳ್ಳಲಾಗುವದು. ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಜೈವಿಕ ಗೊಬ್ಬರ ತಯಾರಿಸಿ ತರಕಾರಿ ಗಿಡಗಳಿಗೆ, ಹೂ ತೋಟಗಳಿಗೆ ಬಳಸಿಕೊಳ್ಳುವಂತೆ ತಿಳಿಸಲಾಯಿತು. ಜೈವಿಕ ಗೊಬ್ಬರ ತಯಾರಿಸುವದರಿಂದ ಕಸದ ಸಮಸ್ಯೆಯನ್ನು ಕಡಿಮೆ ಮಾಡಬಹುದು ಎಂದು ಹೇಳಿದರು. ಈ ಸಂದರ್ಭ ಕಾವೇರಿ ಪಾಲಿಟೆಕ್ನಿಕ್ ಪ್ರಾಂಶುಪಾಲ ಕೆ. ಶ್ರೀನಿವಾಸ್, ಉಪನ್ಯಾಸಕರಾದ ಕಾಟಿಮಾಡ ದೇವಯ್ಯ, ಪ್ರವೀಣ್ ಕುಮಾರ್, ಪವಿತ್ರ ಹಾಗೂ ವಸತಿ ನಿಲಯದ ವಿದ್ಯಾರ್ಥಿಗಳು ಇದ್ದರು.