ನಾಪೋಕ್ಲು, ಮಾ. 25: ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರು ವಿಧಾನಸಭೆಯಲ್ಲಿ ಜಮ್ಮಾ ಸಮಸ್ಯೆ ಕುರಿತು ವಿಧೇಯಕ ಮಂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಸೇವ್ ಕೊಡಗು ವಿವರಿಸಿದೆ.

ಜಿಲ್ಲೆಯನ್ನು ಯುನೆಸ್ಕೋ ಹೆರಿಟೇಜ್ ಪಟ್ಟಿಗೆ ಸೇರಿಸುವ ಪರಿಸರವಾದಿಗಳ ವಿರುದ್ಧ ಹೋರಾಟ, ಮುಜರಾಯಿ ಸೇರಿದಂತೆ ದೇವಾಲಯಗಳಿಗೆ ಅನುದಾನ, ಜಿಲ್ಲೆಯ ರಸ್ತೆಗಳ ಅಭಿವೃದ್ಧಿಗೂ ಬೋಪಯ್ಯ ಅವರ ಕೊಡುಗೆ ಸ್ಮರಣೀಯವೆಂದು ಸಂಸ್ಥೆಯ ಬಿ.ಟಿ. ದಿನೇಶ್, ಜಿನ್ನು ನಾಣಯ್ಯ, ಮಧು ಬೋಪಣ್ಣ ಹಾಗೂ ಎನ್.ಎಸ್. ಉದಯಶಂಕರ್ ಹೇಳಿಕೆ ನೀಡಿದ್ದಾರೆ.