ಮಡಿಕೇರಿ, ಮಾ. 25: ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಅಂತರ್ಜಾಲ ವಿಸ್ತøತ ಸಂಪರ್ಕ ಯೋಜನೆಯಡಿ, ಅನುಷ್ಠಾನ ಗೊಂಡಿರುವ ಆಧುನಿಕ ತಂತ್ರಜ್ಞಾನ ನಿರ್ವಹಣಾ ವ್ಯವಸ್ಥೆಯಲ್ಲಿ ಕೋಟಿಗಟ್ಟಲೆ ಹಣ ದುರುಪಯೋಗ ಆರೋಪ ಕೇಳಿ ಬಂದಿದೆ. ಈ ಅವ್ಯವಹಾರದಲ್ಲಿ ರಾಜ್ಯದ ಪ್ರತಿಷ್ಠಿತ ಉದ್ದಿಮೆ, ಆಯಕಟ್ಟಿನಲ್ಲಿ ಕುಳಿತಿರುವ ಅಧಿಕಾರಿಗಳು ಹಾಗೂ ಸರಕಾರ ನಡೆಸುವವರೂ ಶಾಮೀಲಾಗಿರುವ ಶಂಕೆ ವ್ಯಕ್ತಗೊಂಡಿದೆ.‘ಶಕ್ತಿ’ಗೆ ಲಭಿಸಿರುವ ಮಾಹಿತಿ ಪ್ರಕಾರ ಅಂದಾಜು ರೂ. 800 ಕೋಟಿಯ ಈ ಯೋಜನೆಯಲ್ಲಿ ಭಾರೀ ಅವ್ಯವಹಾರದೊಂದಿಗೆ ಕೊಡಗಿನಲ್ಲಿಯೂ ಪರಿಣಾಮಕಾರಿ ಅನುಷ್ಠಾನಗೊಳಿಸದೆ, ಯೋಜನೆಯ ಗುತ್ತಿಗೆ ಸಂಸ್ಥೆಯೊಂದಿಗೆ ಈ ಹಿಂದೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿರುವ ಅಧಿಕಾರಿಗಳು ಶಾಮೀಲಾಗಿರುವ ಅನುಮಾನ ಹುಟ್ಟಿಕೊಂಡಿದೆ.

ಮೂಲಗಳ ಪ್ರಕಾರ ಪ್ರಾರಂಭದಲ್ಲಿ ಈ ಅಂತರ್ಜಾಲ ಕೇಂದ್ರವನ್ನು ನಗರದ ವಾರ್ತಾಭವನ ಕಟ್ಟಡದಲ್ಲಿ ಸ್ಥಾಪಿಸಲಾಗಿದೆ. ಇಲ್ಲಿ ಈಗಾಗಲೇ ಪ್ರಾರಂಭಿಕ ಕಾರ್ಯ ನಿರ್ವಹಣೆ ಮುಂದುವರಿದಿದ್ದು, ಖಾಸಗಿ ಸಂಸ್ಥೆಯೇ ಒಂದಿಬ್ಬರು ಉದ್ಯೋಗಿಗಳನ್ನು ನಿಯೋಜಿಸಿದೆ.

ಅನಂತರದಲ್ಲಿ ಮಡಿಕೇರಿಯ ನೂತನ ಜಿಲ್ಲಾ ಆಡಳಿತ ಭವನ ನಿರ್ಮಾಣದೊಂದಿಗೆ ಈ ಕಚೇರಿ (ಏSWಂಓ) ಜಿಲ್ಲಾ ಆಡಳಿತ ಭವನಕ್ಕೆ ಸ್ಥಳಾಂತರಗೊಂಡಿರುವದಾಗಿ ಹೇಳಲಾಗುತ್ತಿದೆ. ಅಲ್ಲದೆ ಈ ಬಾಬ್ತು ರೂ. 13.75 ಲಕ್ಷ ಹಣವನ್ನು ಕಚೇರಿ ಸ್ಥಳಾಂತರ ವೆಚ್ಚವೆಂದು ಲೆಕ್ಕ ತೋರಿಸಲಾಗಿದೆ ಸಂಶಯ ಹುಟ್ಟಿಕೊಂಡಿರುವದೇ ಇಲ್ಲ್ಲಿ.

ಜಿಲ್ಲಾ ಆಡಳಿತ ಭವನದ ಮಾಹಿತಿ ಸಂಪರ್ಕ ಅಧಿಕಾರಿಯೊಬ್ಬರು, ವಿಸ್ತøತ ಅಂತರ್ಜಾಲ ಕಚೇರಿ ಸಂಬಂಧ ಆರ್‍ಟಿಐ ಅರ್ಜಿದಾರರೊಬ್ಬರಿಗೆ ಮಾಹಿತಿ ನೀಡುವಾಗ, ವಾರ್ತಾಭವನ ಕಟ್ಟಡದಿಂದ ಕಿ.ಮೀ. ಅಂತರದ ನೂತನ ಜಿಲ್ಲಾ ಆಡಳಿತ ಭವನಕ್ಕೆ ಕಚೇರಿ ಸ್ಥಳಾಂತರ ಬಾಬ್ತು ಮೇಲಿನ ಖರ್ಚು ಮಾಡಲಾಗಿದೆ ಎಂದು ವಿವರಿಸಿದ್ದಾರೆ.

ಆದರೆ ಜಿಲ್ಲಾ ಆಡಳಿತ ಭವನದಲ್ಲಿ ಕೇವಲ ಅಂತರ್ಜಾಲ ಸಂಪರ್ಕದೊಂದಿಗೆ ಸಮ್ಮೇಳನ ಕೊಠಡಿ (ಕಾನ್ಫರೆನ್ಸ್ ಹಾಲ್) ರೂಪಿಸಿದ್ದು, ಮೇಲ್ಕಾಣಿಸಿದ ಅಂತರ್ಜಾಲ ಕಚೇರಿ ಇನ್ನು ವಾರ್ತಾಭವನ ಕಟ್ಟಡದಲ್ಲೇ ಕಾರ್ಯನಿರ್ವಹಿಸುತ್ತಿದೆ. ರಾಜ್ಯ ಮಟ್ಟದಲ್ಲಿ ಭಾರೀ ಅವ್ಯವಹಾರದ ಶಂಕೆಗೆ ಕಾರಣವಾಗಿರುವ ಈ ಹಗರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಕೇಳಿಬರುತ್ತಿರುವ ದುರುಪಯೋಗ ಕುರಿತು ನೂತನ ಜಿಲ್ಲಾಧಿಕಾರಿಗಳು ನಿಗಾವಹಿಸಿ ಸತ್ಯಾಂಶ ಬಹಿರಂಗಗೊಳಿಸಬೇಕಿದೆ.