ಗೋಣಿಕೊಪ್ಪ ವರದಿ, ಮಾ. 24: ಗೋಣಿಕೊಪ್ಪಲಿನ ಕೀರೆಹೊಳೆಯನ್ನು ಒತ್ತುವರಿ ಮಾಡಿರುವವರ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಧೋರಣೆ ವಿರುದ್ದ ಒಂದನೇಯ ಬ್ಲಾಕ್ ನಿವಾಸಿ ಹೆಚ್.ಎಲ್ ಕುಮಾರಪ್ಪ ಏಕಾಂಗಿಯಾಗಿ ಪ್ರತಿಭಟಿಸಿದರು.

ಒತ್ತುವರಿದಾರರ ವಿರುದ್ದ ಕ್ರಮಕೈಗೊಳ್ಳುವಂತೆ 2016ರಲ್ಲಿ ಮನವಿ ಸಲ್ಲಿಸಿ ಯಾವದೇ ಕ್ರಮ ಕೈಗೊಂಡಿಲ್ಲ. ಮಾಹಿತಿ ಹಕ್ಕಿನ ಅಡಿಯಲ್ಲಿ ಮಾಹಿತಿ ಸಂಗ್ರಹಿಸಿ ಒತ್ತುವರಿಯಾದ ಪ್ರದೇಶದ ಸಂಪೂರ್ಣ ಮಾಹಿತಿಯನ್ನು ಸಲ್ಲಿಸಿ ಯಾವದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.

ಪ್ರತಿ ವರ್ಷ ಕೀರೆಹೊಳೆ ಹೂಳೆತ್ತಲು ಅನಾವಶ್ಯಕವಾಗಿ ಹಣ ಪೋಲಾಗುತ್ತದೆ. ಕೀರೆ ಹೊಳೆ ಒತ್ತುವರಿಗೊಂಡು ಚರಂಡಿಯಾಗಿ ಪರಿವರ್ತನೆಯಾಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷರು ಅಹವಾಲನ್ನು ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.