ಮಡಿಕೇರಿ, ಮಾ. 23: ಪೊನ್ನಂಪೇಟೆಯ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಿಜಿಯಲ್ಲಿ ರೊಟರ್ಯಾಕ್ಟ್ ಕ್ಲಬ್, ರಾಷ್ಟ್ರೀಯ ಸೇವಾ ಯೋಜನೆ, ರೆಡ್ ರಿಬ್ಬನ್ ಕ್ಲಬ್ ಪ್ರಾಯೋಜಕತ್ವದಲ್ಲಿ ರಕ್ತದಾನ ಶಿಬಿರ ನಡೆಸಲಾಯಿತು.
ರೆಡ್ ಕ್ರಾಸ್ ಸೊಸೈಟಿ, ಬೆಂಗಳೂರು ಮತ್ತು ಜಿಲ್ಲಾ ರಕ್ತನಿಧಿ ಕೇಂದ್ರ ಸಹಭಾಗಿತ್ವದಲ್ಲಿ ನಡೆದ ಈ ಶಿಬಿರದಲ್ಲಿ ರೆಡ್ ಕ್ರಾಸ್ ಸೊಸೈಟಿಯ ಡಾ. ಶ್ಯಾಮಸುಂದರ್ ಮತ್ತು ಜಿಲ್ಲಾ ರಕ್ತನಿಧಿ ಕೇಂದ್ರದ ಡಾ. ಕರುಂಬಯ್ಯ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಪ್ರಾಂಶುಪಾ¯ ಡಾ. ಪಿ. ಮಹಾಭಲೇಶ್ವರಪ್ಪ ಸಭಿಕರನ್ನು ಸ್ವಾಗತಿಸಿ, ರಕ್ತದಾನದ ಮಹತ್ವವನ್ನು ವಿವರಿಸಿದರು.
ಡಾ. ಶ್ಯಾಮಸುಂದರ್ ಮಾತನಾಡಿ, ರಕ್ತದಾನ ಮಾಡುವದು ಬಹಳ ಅಮೂಲ್ಯವಾದ ಕರ್ತವ್ಯ ಎಂದು ತಿಳಿಸಿದರು. ಡಾ. ಕರುಂಬಯ್ಯ ಮಾತನಾಡಿ, ರಕ್ತದಾನದಿಂದ ದಾನಿಗಳ ಆರೋಗ್ಯಕ್ಕೆ ಆಗುವ ಉಪಯೋಗಳನ್ನು ತಿಳಿಸಿದರು. ಸಭೆಯಲ್ಲಿ ರೋಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ದಿ¯ನ್ ಚಂಗಪ್ಪ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಸುಜಿತ್ ಎನ್.ಎಸ್., ರೆಡ್ ರಿಬ್ಬನ್ ಕ್ಲಬ್ ಅಧ್ಯಕ್ಷ ಬಿ.ಎಲ್. ಪುರುಷೋತ್ತಮ, ಕ್ಲಬ್‍ನ ಇತರ ಸದಸ್ಯರು ಹಾಗೂ ಹಲವು ಸ್ವಯಂ ಸೇವಕ-ಸೇವಕಿಯರು ಭಾಗವಹಿಸಿದ್ದರು. ಈ ಶಿಬಿರದಲ್ಲಿ 75 ಮಂದಿ ರಕ್ತದಾನ ಮಾಡಿದರು. ಸುಜನಿ ವಂದಿಸಿದರು.