ಮಡಿಕೇರಿ, ಮಾ. 23: ಪುತ್ತೂರು ಸಮೀಪದ ಕೋವಿಲಾ ನಿವಾಸಿ ರಮೇಶ ಶೆಟ್ಟಿ ಎಂಬವರು ಚಾಲಿಸುತ್ತಿದ್ದ ಕಾರೊಂದು (ಕೆಎ-21, ಎಂ.ಡಿ. 3201) ಕಾಟಕೇರಿ ಬಳಿ ರಸ್ತೆ ಬದಿ ದಿಣ್ಣೆಗೆ ಅಪ್ಪಳಿಸಿ ವಾಹನದಲ್ಲಿದ್ದ ಹೇಮ ಹಾಗೂ ಇತರರು ಗಾಯಗೊಂಡಿದ್ದಾರೆ. ಚಾಲಕನ ಅಜಾಗರೂಕತೆ ಬಗ್ಗೆ ಗ್ರಾಮಾಂತರ ಠಾಣಾಧಿಕಾರಿ ಚೇತನ್ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಿದ್ದಾರೆ.