ವೀರಾಜಪೇಟೆ, ಮಾ. 23: ಕಳೆದ 30 ತಿಂಗಳುಗಳಿಂದ ಇಲ್ಲಿನ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಕೃಷ್ಣ ಪ್ರಸಾದ್ ಅವರನ್ನು ದಿಢೀರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿರುವದನ್ನು ರದ್ದುಪಡಿಸುವಂತೆ ಜಯ ಕರ್ನಾಟಕ ಸಂಘಟನೆಯ ತಾಲೂಕು ಸಮಿತಿ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿರುವದಾಗಿ ಅಧ್ಯಕ್ಷ ಮಂಡೇಟಿರ ಅನಿಲ್ ಅಯ್ಯಪ್ಪ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅನಿಲ್, ಸರಕಾರದ ವಿವಿಧ ಯೋಜನೆಗಳ ಮೂಲಕ ಪಟ್ಟಣದ ಸ್ವಚ್ಛತೆ ಕಾಪಾಡಲು ವಿಶೇಷ ಆಸಕ್ತಿ ವಹಿಸಿದ್ದರು. ಕಸ ಮುಕ್ತ ಪಟ್ಟಣವನ್ನಾಗಿ ಮಾಡಲು ಇವರ ಪ್ರಯತ್ನ ಯಶಸ್ಸನ್ನು ಕಂಡಿದೆ. ಜನಪರ ಅಗತ್ಯ ಕಾಮಗಾರಿಗಳಿಗೂ ಪಂಚಾಯಿತಿ ಅಭಿಯಂತರೊಂದಿಗೆ ಆದ್ಯತೆ ನೀಡುತ್ತಿದ್ದರು ಎಂದರು.

ಸಂಘಟನೆಯ ನಗರ ಅಧ್ಯಕ್ಷ ಎಸ್.ಹೆಚ್. ಮಂಜುನಾಥ್ ಮಾತನಾಡಿ, ಕಳೆದ 20 ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿದ್ದ 36 ಮಳಿಗೆಗಳ ಹರಾಜಿಗೆ ಕೃಷ್ಣ ಪ್ರಸಾದ್ ಕಾನೂನು ಬದ್ದವಾಗಿ ಚಾಲನೆ ನೀಡಿ ವಾರ್ಷಿಕ ಆದಾಯವನ್ನು ಹೆಚ್ಚಿಸಿದ್ದಾರೆ ಎಂದರು.

ಗೋಷ್ಠಿಯಲ್ಲಿ ವರ್ತಕರಾದ ಕೆ.ಎಫ್. ಖಾಲಿದ್, ಭೀಮಯ್ಯ, ಕೆ.ವಿ. ಅಶೋಕ್, ತಾಲೂಕು ಸಮಿತಿ ಉಪಾಧ್ಯಕ್ಷ ಕುಂಞÂೀರ ಸುನು ಸುಬ್ಬಯ್ಯ ಉಪಸ್ಥಿತರಿದ್ದರು.