ವೀರಾಜಪೇಟೆ, ಮಾ.23: ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕ್ರಿಶ್ಚಿಯನ್ ಕಾಲೋನಿ ರಸ್ತೆಯು ತೀರಾ ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಸಂಬಂಧ ಪಟ್ಟ ಇಲಾಖೆಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ವಾಗದ ಕಾರಣ ಮುಂಬರುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರ ಕೈಗೊಳ್ಳ ಲಾಗಿದೆ ಎಂದು ಗ್ರಾಮಸ್ಥರ ಪರವಾಗಿ ಮಾಳೇಟಿರ ಸಾಬ ಮುತ್ತಪ್ಪ ಹಾಗೂ ಜೀವನ್ ಹೇಳಿ ದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಲೋಕೋ ಪಯೋಗಿ ಇಲಾಖೆಗೆ ಸಂಬಂಧಿಸಿದ ರೆಸ್ತೆಯ ಎರಡು ಬದಿಯಲ್ಲಿ ಕಾಡು ಬೆಳೆದುಕೊಂಡಿದೆ. ಎದುರುಗಡೆಯಿಂದ ಬರುವ ವಾಹನಗಳು ಕಾಣುವದಿಲ್ಲ. ಏಕ ಕಾಲದಲ್ಲಿ ಎರಡು ಕಡೆಗಳಿಂದ ವಾಹನ ಬಂದರೆ ಅಪಘಾತ ವಾಗುವದರೊಂದಿಗೆ ಸಾರ್ವಜನಿಕರ ರಸ್ತೆ ಬದಿಯ ಸಂಚಾರ ಕ್ಕೂ ಅಡಚಣೆ ಯಾಗುತ್ತಿದೆ. ರಸ್ತೆಯ ಅಕ್ಕ ಪಕ್ಕದ ಕುರು ಚಲು ಗಿಡಗಳನ್ನು ತೆಗೆದು ರಸ್ತೆ ದುರಸ್ತಿ ಪಡಿಸುವಂತೆ ಗ್ರಾಮ, ತಾಲೂಕು, ಜಿಲ್ಲಾ ಪಂಚಾಯಿತಿ, ಹಾಗೂ ಲೋಕೋಪ ಯೋಗಿ ಇಲಾಖೆಗೂ ಮನವಿ ಸಲ್ಲಿಸಿದರೂ ಪರಿಹಾರ ಕಂಡುಬಂದಿಲ್ಲ. ಇದಕ್ಕಾಗಿ ಮೇ ತಿಂಗಳ ಮೊದಲ ವಾರದಲ್ಲಿ ನಡೆಯವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಗ್ರಾಮಕ್ಕೆ ಯಾವದೇ ರಾಜಕೀಯ ಪಕ್ಷ ಚುನಾವಣಾ ಪ್ರಚಾರಕ್ಕಾಗಿ ಬರುವದು ಬೇಡ ಎಂದು ಹೇಳಿದರು. ಗೋಷ್ಠಿಯಲ್ಲಿ ಗ್ರಾಮಸ್ಥರಾದ ಬಿ.ಎನ್ ವಸಂತ್, ರೋಷನ್, ಅಖಿಲೇಶ್, ಅಶೋಕ್ ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.