ಗೋಣಿಕೊಪ್ಪ ವರದಿ, ಮಾ. 23: ಮಾಯಮುಡಿ ಗ್ರಾಮದಲ್ಲಿ ನಿರಂತರವಾಗಿ ಧಾಳಿ ನಡೆಸುತ್ತಿದ್ದ ಕಾಡಾನೆ ಹಿಂಡಿನ ಹೆಣ್ಣಾನೆಯೊಂದಕ್ಕೆ ಅರಣ್ಯ ಇಲಾಖೆ ವತಿಯಿಂದ ರೇಡಿಯೋ ಕಾಲರ್ ಅಳವಡಿಸಲಾಯಿತು. ಅಲ್ಲಿನ ಅಂಬುಕೋಟೆ ಎಂಬಲ್ಲಿ ಪತ್ತೆಯಾದ ಆನೆಗೆ ಅರವಳಿಕೆ ಮದ್ದು ನೀಡಿ, ಸಾಕಾನೆಗಳ ಸಹಕಾರದಲ್ಲಿ ಅಳವಡಿಸಿ ಬಿಡಲಾಯಿತು.

ಸುಮಾರು 2 ಗಂಟೆಗಳ ನಡೆದ ಕಾರ್ಯಾಚರಣೆಯಲ್ಲಿ ತಿತಿಮತಿ ಅರಣ್ಯ ಇಲಾಖೆ ಹಾಗೂ ತಿತಿಮತಿ ಆರ್‍ಆರ್‍ಟಿ ತಂಡದ ಸಿಬ್ಬಂದಿ ಪಾಲ್ಗೊಂಡರು.

ಪಶುವೈದ್ಯ ಡಾ. ಮುಜಿಬ್ ರೆಹಮಾನ್ ಅರವಳಿಕೆ ಮದ್ದು ನೀಡಿದರು. ಸಾಕಾನೆಗಳಾದ ಅಭಿಮನ್ಯು, ಭೀಮಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡವು.

ಅಲ್ಲಿನ ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳ ಹಿಂಡಿನಿಂದ 25 ವರ್ಷದ ಹೆಣ್ಣಾನೆಯೊಂದನ್ನು ಬೇರ್ಪಡಿಸಿ ಅಳವಡಿಸಲಾಯಿತು. ಈ ಸಂದಭರ್À ಡಿಸಿಎಫ್ ಮರಿಯಾ ಕ್ರೈಸ್ತರಾಜ್, ಎಸಿಎಫ್ ಶ್ರೀಪತಿ, ಆರ್‍ಎಫ್‍ಒ ಅಶೋಕ್ ಉಪಸ್ಥಿತರಿದ್ದರು. - ಸುದ್ದಿಪುತ್ರ