ಮಡಿಕೇರಿ, ಮಾ.23 : ನಗರದ ಜನತೆಯ ಬಹುನಿರೀಕ್ಷೆಯ ನೂತನ ಖಾಸಗಿ ಬಸ್ ನಿಲ್ದಾಣ ಮತ್ತು ಮಾರುಕಟ್ಟೆ ಸಂಕೀರ್ಣವನ್ನು ಕಾಮಗಾರಿ ಪೂರ್ಣಗೊಳ್ಳುವದಕ್ಕೂ ಮೊದಲೇ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ತರಾತುರಿ ಯಲ್ಲಿ ಉದ್ಘಾಟನೆ ಮಾಡಲಾಗಿದೆ ಮತ್ತು ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಜಿಲ್ಲಾ ಜೆಡಿಎಸ್‍ನ ಪ್ರಚಾರ ಸಮಿತಿ ಅಧ್ಯಕ್ಷ ಕೆ.ಎಂ. ಗಣೇಶ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿ ಬಸ್ ನಿಲ್ದಾಣ ಮತ್ತು ನೂತನ ಮಾರುಕಟ್ಟೆಯ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ. ತರಾತುರಿಯಲ್ಲಿ ಉದ್ಘಾಟಿಸುವ ಮೂಲಕ ಜನರ ಹಾದಿ ತಪ್ಪಿಸುವ ಯತ್ನ ಮಾಡಲಾಗಿದೆ ಎಂದು ಆರೋಪಿಸಿದರು.
ಖಾಸಗಿ ಬಸ್ ನಿಲ್ದಾಣ ಕಾಮಗಾರಿ ಇನ್ನೂ ಪೂರ್ಣ ಗೊಂಡಿಲ್ಲವಾದರೆ, ಮಾರು ಕಟ್ಟೆಯ ಕಾಮಗಾರಿ ಅವೈಜ್ಞಾನಿಕ ವಾಗಿದೆ. ಅದರ ತಳ ಹಂತದ ಸೆಲ್ಲಾರ್‍ನಲ್ಲಿ ಮಳೆÉಯ ಸಂದರ್ಭ 2 ರಿಂದ 3 ಅಡಿಗಳಷ್ಟು ನೀರು ನಿಲ್ಲುತ್ತದೆ. ಸೂಕ್ತ ಚರಂಡಿ ವ್ಯವಸ್ಥೆಯನ್ನು ಕಲ್ಪಿಸಿಲ್ಲ, ಕೆಲವೆಡೆ ಕಟ್ಟಡದ ಗೋಡೆಗೆ ಸಿಮೆಂಟ್ ಪ್ಲಾಸ್ಟರ್ ಮಾಡಿದ ಅರ್ಧಗಂಟೆಯಲ್ಲೆ ಬಣ್ಣ ಬಳಿಯುವ ಕಾರ್ಯವೂ ನಡೆದಿರುವದಾಗಿ ಅಸಮಾಧಾನ ವ್ಯಕ್ತಪಡಿಸಿದರು.
ನೂತನ ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್‍ಗಳ ಮತ್ತು ಪ್ರಯಾಣಿಕರ ಸಂಚಾರಕ್ಕೆ ಅನುಕೂಲ ವಾಗುವಂತೆ ಇರುವ ಜಾಗದ ಒಂದು ಭಾಗವನ್ನು ‘ಇಂದಿರಾ ಕ್ಯಾಂಟೀನ್’ಗೆ ಬಳಸಿ ಕೊಂಡಿರುವದಕ್ಕೆ ತಮ್ಮ ವಿರೋಧವಿದೆ ಎಂದು ಕೆ.ಎಂ.ಗಣೇಶ್ ಹೇಳಿದರು.
ಮಡಿಕೆÉೀರಿ ನಗರಸಭೆಗೆ 36 ಕೋಟಿ ರೂ.ಗಳನ್ನು ಒದಗಿಸಿರುವ ದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅವರು ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು. ನಗರೋತ್ಥಾನದ 3ನೇ ಹಂತವಾಗಿ ಈ ಅನುದಾನ ನಗರಸಭೆÉಗೆ ಲಭ್ಯವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಲ್ಲದೆ ಇತರ ಯಾವದೇ ಸರ್ಕಾರವಿದ್ದರು ಈ ಹಣ ನಗರಸಭೆÉಗೆ ಬರುವಂತದ್ದೇ ಆಗಿತ್ತು. ನಗರೋತ್ಥಾನದ ಅನುದಾನ ನಗರಸಭೆ ಸೇರಿದಂತೆ ಪಟ್ಟಣ ಪಂಚಾಯ್ತಿಗಳಿಗೂ ಲಭ್ಯವಿರುವದಾಗಿ ಸ್ಪಷ್ಟಪಡಿಸಿದರು.
ನಗರಸಭೆÉಯಲ್ಲಿ ಕಾಂಗ್ರೆಸ್ ಪಕ್ಷವೇ ಆಡಳಿತದಲ್ಲಿದ್ದು, ಲಭ್ಯವಿರುವ 36 ಕೋಟಿ ಅನುದಾನಕ್ಕೆ ಸಂಬಂಧಿಸಿದಂತೆ ಟೆಂಡರ್ ಅಂತಿಮಗೊಳಿಸಿ ಕಾಮಗಾರಿ ಆರಂಭಿಸಬೇಕಿತ್ತಾದರೂ ಅದು ಸಾಧ್ಯವಾಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ನಗರಸಭೆÉಯ ಕಾಂಗ್ರೆಸ್ ಆಡಳಿತದ ನಡುವಿನ ಹೊಂದಾಣಿಕೆಯ ಕೊರತೆಯೇ ಇದಕ್ಕೆ ಕಾರಣವಾಗಿದ್ದು, ಇದನ್ನು ಮರೆಮಾಚಿ ಇದೀಗ ಅನುದಾನ ಬಳಕೆ ಮಾಡಿಲ್ಲವೆಂದು ನಗರಸಭೆಯ ಸದಸ್ಯರುಗಳ ಮೇಲೆ ತಪ್ಪುಹೊರಿಸ ಲಾಗಿದೆ ಎಂದು ಟೀಕಿಸಿದರು.
ಜೆಡಿಎಸ್ ಪಕ್ಷವನ್ನು ಯಂ.ಸಿ.ನಾಣಯ್ಯ ಅವರು ತೊರೆಯುತ್ತಿರುವದರಿಂದ ಜಿಲ್ಲೆಯಲ್ಲಿ ಪಕ್ಷಕ್ಕೆ ಯಾವದೇ ಹಾನಿ ಇಲ್ಲವೆಂದು ಕೆ.ಎಂ. ಗಣೇಶ್ ಇದೇ ಸಂದರ್ಭ ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ನಗರಸಭಾ ಸದಸ್ಯೆ ಲೀಲಾ ಶೇಷಮ್ಮ, ಪಕ್ಷದ ಹಿಂದುಳಿದ ಘಟಕದ ಅಧ್ಯಕ್ಷ ಸುನಿಲ್, ನಗರ ಯುವ ಘಟಕದ ಅಧ್ಯಕ್ಷ ಕಿರಣ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುಖೇಶ್ ಚಂಗಪ್ಪ ಹಾಗೂ ನಗರ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಬ್ರಾಹಿಂ ಉಪಸ್ಥಿತರಿದ್ದರು.