ಭಗವತಿ ವಾರ್ಷಿಕ ಉತ್ಸವ

ನಾಪೋಕ್ಲು: ಸ್ಥಳೀಯ ಹಳೆ ತಾಲೂಕು ಭಗವತಿ ದೇವಾಲಯದ ವಾರ್ಷಿಕ ಹಬ್ಬ ಸಂಭ್ರಮದಿಂದ ಜರುಗಿತು. ಸೋಮವಾರ ಮಧ್ಯಾಹ್ನ ದೇವಾಲಯದಲ್ಲಿ ಎತ್ತು ಪೋರಾಟ ನಂತರ ಗ್ರಾಮಸ್ಥರಿಂದ ಬೊಳ್‍ಕಾಟ್, ಕೇರಳದ ಚಂಡೆ ವಾದ್ಯ ನೆರೆದ ಭಕ್ತರ ಗಮನ ಸೆಳೆಯಿತು.

ಹಬ್ಬದ ಪ್ರಯುಕ್ತ ಅನ್ನದಾನ ಏರ್ಪಡಿಸಲಾಗಿತ್ತು. ದೇವರ ವಿಗ್ರಹ ಹೊತ್ತು ನೃತ್ಯಬಲಿ ಜರುಗಿತು. ಕಳೆದ ರಾತ್ರಿ ಜರುಗಿದ ಹಬ್ಬದ ಕಾರ್ಯಕ್ರಮದಲ್ಲಿ ಊರಿನ ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಮುತ್ತಪ್ಪ ಜಾತ್ರೆ

*ಗೋಣಿಕೊಪ್ಪಲು: ತಿತಿಮತಿ ಕರಡಿಕೊಪ್ಪ ಶ್ರೀ ಮುತ್ತಪ್ಪ ದೇವರ ಜಾತ್ರೆ ಮೂರು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಿತು. ಸಂಜೆ 6 ರಿಂದ ಮರುದಿನ ಮಧ್ಯಾಹ್ನದವರೆಗೆ ವಿವಿಧ ದೇವರ ತೆರೆಗಳ ದರ್ಶನ ನಡೆಯಿತು.

ಭಕ್ತಾದಿಗಳು ಹರಕೆಗಳನ್ನು ದೇವರಿಗೆ ಒಪ್ಪಿಸಿದರು. ಮೂರು ದಿನ ಭಕ್ತಾದಿಗಳಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ಮುತ್ತಪ್ಪ, ಬಸರಿಮಲೆ, ಚಾಮುಂಡಿ, ಕುಟ್ಟಿಚಾತ, ಗುಳಿಗ, ಪೆÇೀದಿ ವಿವಿಧ ದೇವರ ತೆರೆಗಳು ನಡೆದವು.

ಶ್ರೀ ಭಗವತಿ ಪೂಜೆ

ಗುಡ್ಡೆಹೊಸೂರು: ತ್ಯಾಗತ್ತೂರು ಗ್ರಾಮದ ಶ್ರೀ ಭಗವತಿ ದೇವಸ್ಥಾನದ ವಾರ್ಷಿಕ ಉತ್ಸವ ತಾ. 24 ರಿಂದ 27 ರವರೆಗೆ ವಿಜೃಂಭಣೆಯಿಂದ ನಡೆಯಲಿದೆ. ವಾರ್ಷಿಕ ಪೂಜೆ

ಸುಂಟಿಕೊಪ್ಪ: ಶ್ರೀ ಕೊಡಂಗಲ್ಲೂರು ಭದ್ರಕಾಳಿ ಶ್ರೀ ಕುರುಂಭ (ಭಗವತಿ) ದೇವಸ್ಥಾನದ ವಾರ್ಷಿಕ ಪೂಜೆಯು ಶೃದ್ಧಾಭಕ್ತಿಯಿಂದ ನಡೆಯಿತು. ಮಹಾಪೂಜೆಯ ಅಂಗವಾಗಿ ದೇವಸ್ಥಾನ ಹಾಗೂ ಆವರಣವನ್ನು ವಿವಿಧ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಭಕ್ತಾದಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.ಪಟ್ಟಣಿ ಹಬ್ಬ

ನಾಪೆÇೀಕ್ಲು: ಭಗವತಿ ದೇವಾಲಯದ ವಾರ್ಷಿಕ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು.