ಮಡಿಕೇರಿ, ಮಾ. 21: ಚೆಟ್ಟಳ್ಳಿ ಮೂಲಕ ಮಡಿಕೇರಿ ಮತ್ತು ಬೆಂಗಳೂರಿಗೆ ಪ್ರಯಾಣ ಬೆಳೆಸುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ ಸಂಚಾರವನ್ನು ರಾಜಕೀಯ ದುರುದ್ದೇಶದಿಂದ ಸ್ಥಗಿತಗೊಳಿಸಲಾಗಿದೆ ಎಂದು ಆರೋಪಿಸಿರುವ ಚೆಟ್ಟಳ್ಳಿ ಗ್ರಾಮಸ್ಥರು, ಮುಂದಿನ 15 ದಿನಗಳ ಒಳಗಾಗಿ ಬಸ್ ಸಂಚಾರವನ್ನು ಪುನರಾರಂಭಿಸದಿದ್ದಲ್ಲಿ ಕೆಎಸ್‍ಆರ್‍ಟಿಸಿ ಡಿಪೆÀÇೀ ಎದುರು ಪ್ರತಿಭಟನೆ ನಡೆಸುವದಾಗಿ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಾ.ಪಂ. ಮಾಜಿ ಸದಸ್ಯ ಜಾನ್ಸನ್, ಕೆಲವು ವರ್ಷಗಳ ಹಿಂದೆ ಚೆಟ್ಟಳ್ಳಿ ಮಾರ್ಗವಾಗಿ ಬೆಂಗಳೂರಿಗೆ ತೆರಳಲು 14 ಕೆಎಸ್‍ಆರ್‍ಟಿಸಿ ಬಸ್‍ಗಳಿದ್ದವು. ಆದರೆ ಪ್ರಸ್ತುತ ಕೇವಲ 3 ಬಸ್‍ಗಳು ಮಾತ್ರ ಸಂಚರಿಸುತ್ತಿವೆ ಎಂದರು.
ಗ್ರಾಮಸ್ಥರಾದ ಪ್ಯಾಟ್ರಿಕ್ ಲೋಬೋ ಮಾತನಾಡಿ, ಚೆಟ್ಟಳ್ಳಿ ಮಾರ್ಗವಾಗಿ ಬೆಂಗಳೂರು ಮತ್ತು ಮಂಗಳೂರಿಗೆ ಸಂಪರ್ಕ ಕಲ್ಪಿಸುತ್ತಿದ್ದ ಬಸ್ ಪುತ್ತೂರು ಡಿಪೋದ್ದಾಗಿದ್ದು, ಪುನರಾರಂಭಿಸುವಂತೆ 50 ರಿಂದ 60 ಮನವಿ ಪತ್ರಗಳನ್ನು ಉಸ್ತುವಾರಿ ಸಚಿವರು, ಸಾರಿಗೆ ಸಚಿವರು, ಎಂಎಲ್‍ಸಿ, ಕೆಎಸ್‍ಆರ್‍ಟಿಸಿ ಮೇಲಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟವರಿಗೆ ಸಲ್ಲಿಸಲಾಗಿದ್ದರು ಸೂಕ್ತ ಸ್ಪಂದನ ದೊರಕುತ್ತಿಲ್ಲವೆಂದು ಆರೋಪಿಸಿದರು. ಗ್ರಾಮಸ್ಥ ಪಪ್ಪು ತಿಮ್ಮಯ್ಯ ಮಾತನಾಡಿ, ಬಸ್ ಸಂಚಾರಕ್ಕೆ ಒತ್ತಾಯಿಸಿದರು.
ಗೋಷ್ಠಿಯಲ್ಲಿ ಗ್ರಾಮಸ್ಥರಾದ ದಿಲೀಪ್ ಅಪ್ಪಚ್ಚು ಹಾಗೂ ಬೊಳ್ಳಂಡ ಕಾಶಿ ದೇವಯ್ಯ ಉಪಸ್ಥಿತರಿದ್ದರು.