ಮಡಿಕೇರಿ, ಮಾ. 21: ಹಾಕತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕು ಸ್ಥಾಪನೆಯನ್ನು ಶಾಸಕ ಕೆ.ಜಿ. ಬೋಪಯ್ಯ ನೆರವೇರಿಸಿದರು.

ಹಾಕತ್ತೂರು ಭಗವತಿ ದೇವಾಸ್ಥಾನ ರಸ್ತೆ ರೂ. 3 ಲಕ್ಷ, ಶ್ರೀ ಈಶ್ವರ ದೇವಸ್ಥಾನ ರಸ್ತೆ ರೂ. 3 ಲಕ್ಷ, ಕಗ್ಗೋಡ್ಲು-ಹುಲಿತಾಳ ರಸ್ತೆ ರೂ. 3 ಲಕ್ಷ, ಕಗ್ಗೋಡ್ಲು, ನೀರುಕೊಲ್ಲಿ ರಸ್ತೆ ರೂ. 3 ಲಕ್ಷ, ಚೂರಿಕಾಡು ರಸ್ತೆ ರೂ. 3.5 ಲಕ್ಷ, ತೊಂಭತ್ತು ಮನೆಯ ಕಾಂಕ್ರಿಟ್ ರಸ್ತೆಗೆ ರೂ. 4 ಲಕ್ಷ, ಸುನೀಲ್ ಕುಟುಂಬಸ್ಥರ ಮನೆಗೆ ತೆರÀಳುವ ರಸ್ತೆ ರೂ. 2 ಲಕ್ಷ, ಕಗ್ಗೋಡ್ಲು-ಹುಲಿತಾಳ ಮರು ಡಾಮರೀಕರಣ ರೂ. 8 ಲಕ್ಷ, ಸರಕಾರಿ ಪ್ರೌಢಶಾಲೆಯ ಆಟದ ಮೈದಾನಕ್ಕೆ ಗ್ಯಾಲರಿ ನಿರ್ಮಾಣ ಹಾಗೂ ಕಗ್ಗೋಡ್ಲು ನೀರುಕೊಲ್ಲಿ ರಸ್ತೆ ರೂ. 4 ಲಕ್ಷ, ಬಡ್ಡನ ಕುಟುಂಬ ರೂ. 2 ಲಕ್ಷ, ರೂ. 3 ಲಕ್ಷ ವೆಚ್ಚದ ಹೂಕಾಡು ಆಟದ ಮೈದಾನದ ತಡೆಗೋಡೆ ಕಾಮಗಾರಿಗೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಗ್ರಾ.ಪಂ. ಅಧ್ಯಕ್ಷೆ ಮಂದ್ರೀರ ಶಾರದ, ಉಪಾಧ್ಯಕ್ಷ ಪಿ.ಎಸ್. ವಿಷ್ಣು ಕುಮಾರ್, ಸದಸ್ಯರಾದ ಪಿ.ಇ. ದೇವಿಪ್ರಸಾದ್, ಹೇಮಾವತಿ, ಪಿಯೂಸ್ ಪೆರೆರಾ, ತಾ.ಪಂ. ಸದಸ್ಯೆ ಕುಮುದ ರಶ್ಮಿ, ಬಿಜೆಪಿ ಕಾರ್ಯದರ್ಶಿ ಕೋಡಿರ ಪ್ರಸನ್ನ, ಹಾಕತ್ತೂರು ಸ್ಥಾನೀಯ ಸಮಿತಿ ಉಪಾಧ್ಯಕ್ಷ ಪಿ.ಪಿ. ಸುಕುಮಾರ್, ಕಾರ್ಯದರ್ಶಿ ಕುಂಜಿಲನ ಮಧು ಮೋಹನ್, ಸದಸ್ಯರುಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.