ಗೋಣಿಕೊಪ್ಪ ವರದಿ, ಮಾ. 21: ಅರುವತೋಕ್ಲು ಗ್ರಾಮದ ಲೈನ್ ಮನೆಗಳಲ್ಲಿ ತಾತ್ಕಾಲಿಕವಾಗಿ ವಾಸವಿರುವ ಬುಡಕಟ್ಟು ಕುಟುಂಬ ಗಳಿಗೆ ಪುನರ್ವಸತಿ ಕಲ್ಪಿಸುವಲ್ಲಿ ಹಿಂದೇಟು ಹಾಕಲಾಗುತ್ತಿದೆ ಎಂದು ಆರೋಪಿಸಿ ಲೈನ್ ಮನೆಗಳಲ್ಲಿ ವಾಸ ಮಾಡಿಕೊಂಡಿರುವ ಬುಡಕಟ್ಟು ಕುಟುಂಬಗಳ ಪುನರ್ವಸತಿ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು.

ಪೊನ್ನಂಪೇಟೆಯ ತಾಲೂಕು ಪಂಚಾಯಿತಿ ಕಾರ್ಯನಿರ್ವ ಹಣಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆಯಲ್ಲಿ ಪಾಲ್ಗೊಂಡ ಬುಡಕಟ್ಟು ಕುಟುಂಬಗಳ ಸದಸ್ಯರು ತಮ್ಮ ಬೇಡಿಕೆಗೆ ಸ್ಪಂದನೆ ದೊರಕುವವರೆಗೆ ನಿರಂತರವಾಗಿ ಆಹೋರಾತ್ರಿ ಧರಣಿ ನಡೆಸುವದಾಗಿ ಪಟ್ಟು ಹಿಡಿದರು. ಸಂಚಾಲಕ ವೈ.ಬಿ. ಗಪ್ಪು ಮಾತನಾಡಿ, ಜಿಲ್ಲಾಧಿಕಾರಿಗಳು 2016ರಲ್ಲಿ ಪೊನ್ನಂಪೇಟೆ ಸಮೀಪದ ಕುಂದ ಗ್ರಾಮದಲ್ಲಿ ಪುನರ್ವಸತಿಗಾಗಿ 6 ಎಕರೆ ಭೂಮಿ ನೀಡುವಂತೆ ಆದೇಶ ನೀಡಿ ತಾಲೂಕು ಕಾರ್ಯನಿರ್ವಹ ಣಾಧಿಕಾರಿಗೆ ಸೂಚನೆ ನೀಡಿದ್ದಾರೆ. ಆದರೆ ಬುಡಕಟ್ಟು ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲಾಗಿಲ್ಲ. ಜಿಲ್ಲಾಧಿಕಾರಿಗಳ ಆದೇಶ ಜಾರಿಯಾಗು ವವರೆಗೆ ಪ್ರತಿಭಟನೆಯಿಂದ ಹಿಂದೆ ಸರಿಯುವದಿಲ್ಲ ಎಂದು ಹೇಳಿದರು. ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಬೋಜ, ಸದಸ್ಯ ರಮೇಶ್ ಇದ್ದರು.