ವೀರಾಜಪೇಟೆ, ಮಾ. 21: ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಆರೋಗ್ಯ ವಿಭಾಗದ ವೇಲು ಮುರುಗ, ಸಿಬ್ಬಂದಿಗಳು ಐದು ದಿನಗಳಿಂದ ವಿವಿಧ ಅಂಗಡಿಗಳ ಮೇಲೆ ಧಾಳಿ ನಡೆಸಿ ಅಕ್ರಮ ಪ್ಲಾಸ್ಟಿಕ್ ಚೀಲಗಳನ್ನು ವಶ ಪಡಿಸಿಕೊಂಡು ಇಲ್ಲಿನ ಗೋಣಿಕೊಪ್ಪ ರಸ್ತೆಯ ಹಜಾತ್, ಇಬ್ರಾಹಿಂ, ಶರೀಫ್ ಸೇರಿದಂತೆ ಒಟ್ಟು 7 ವ್ಯಾಪಾರಿಗಳಿಗೆ ದಂಡ ವಿಧಿಸಿ ಕ್ರಮ ಕೈಗೊಂಡಿದ್ದಾರೆ. ಅಕ್ರಮ ಪ್ಲಾಸ್ಟಿಕ್ ಮಾರಾಟದ ವಿರುದ್ಧ ಧಾಳಿ ಮುಂದುವರೆಯಲಿದೆ ಎಂದು ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್ ತಿಳಿಸಿದ್ದಾರೆ.