ಗೋಣಿಕೊಪ್ಪ ವರದಿ, ಮಾ. 21 : ಕೊಡವ ಸಾಹಿತ್ಯ ಅಕಾಡೆಮಿಯ ಪ್ರಾಯೋ ಜಕತ್ವದಲ್ಲಿ ಬಾಳೆಲೆಯಲ್ಲಿ ಏಪ್ರಿಲ್ 18 ರಂದು ನಡೆಯಲಿರುವ ಕೊಡವ ಮೇಳದ ಪೂರ್ವಭಾವಿ ಸಭೆ ಬಾಳೆಲೆ ಕೊಡವ ಸಮಾಜದಲ್ಲಿ ನಡೆಯಿತು.
ಕೊಡವ ಸಮಾಜದ ಸಹಭಾಗಿತ್ವದಲ್ಲಿ ಕೊಡವ ಭಾಷೆ ಮಾತನಾಡುವ 18 ಕೊಡವ ಭಾಷಿಕರ ಸಾಂಸ್ಕøತಿಕ ಹಬ್ಬವಾಗಿ ಮೇಳವನ್ನು ನಡೆಸಲು ಸಭೆಯಲ್ಲಿ ತೀರ್ಮಾನಿಸ ಲಾಯಿತು. ತಾ. 26 ರಂದು ಮತ್ತೊಂದು ಸುತ್ತಿನ ಸಭೆಯ ನಂತರ ಅಂತಿಮ ತೀರ್ಮಾನ ಕೈಗೊಳ್ಳಲು ನಿರ್ಣಯಿಸಲಾಯಿತು.
ಸಭೆಯಲ್ಲಿ ಅಧ್ಯಕ್ಷ ಪೆಮ್ಮಂಡ ಪೊನ್ನಪ್ಪ, ಸದಸ್ಯರುಗಳಾದ ರಮೇಶ್ ಕೇಚಮ್ಮಯ್ಯ, ಭವಾನಿ, ತೋರೇರ ಮುದ್ದಯ್ಯ, ಸುರೇಶ್, ಜಿ.ಪಂ ಸದಸ್ಯ ಪ್ರಥ್ಯು, ಗ್ರಾ.ಪಂ ಉಪಾಧ್ಯಕ್ಷ ಕೊಕ್ಕೇಂಗಡ ಮಹೇಶ್, ಬಾಳೆಲೆ ಕೊಡವ ಸಮಾಜದ ಅಧ್ಯಕ್ಷ ಮಲ್ಚೀರ ಬೋಸ್, ಗ್ರಾಮಸ್ಥರುಗಳಾದ ಯಮುನಾ ಚೆಂಗಪ್ಪ, ಪಡಿಜ್ಞಾರಂಡ ಪ್ರಭು, ಕೃಷ್ಣಾ ಗಣಪತಿ, ಆದೇಂಗಡ ವಿನು ಇದ್ದರು.