ನಾಪೆÇೀಕ್ಲು, ಮಾ. 21: ತಾ. 22ರಿಂದ (ಇಂದಿನಿಂದ) 26ರವರೆಗೆ ಸಮೀಪದ ವೆಸ್ಟ್ ಕೊಳಕೇರಿ ಗ್ರಾಮದ ಶ್ರೀ ಭಗವತಿ ದೇವಿಯ ಉತ್ಸವ ನಡೆಯಲಿದೆ. ತಾ. 22ರಂದು ರಾತ್ರಿ ದೀಪಾರಾಧನೆ, 23ರಂದು ಪಟ್ಟಣಿ ಹಬ್ಬ, ಬೆಳಿಗ್ಗೆ ಮತ್ತು ಸಂಜೆ ದೇವರ ಬಲಿ, 24ರಂದು ದೇವಿಯ ಅವಭೃತ ಸ್ನಾನ, ನೃತ್ಯ ಬಲಿ, ಎತ್ತೇರಾಟ ನಡೆಯಲಿದೆ.

25ರಂದು ಶುದ್ಧ ಕಲಶ, ಸಾರ್ವಜನಿಕ ಅನ್ನಸಂತರ್ಪಣೆ, 26ರಂದು ಅಯ್ಯಪ್ಪ ದೇವರ ಪೂಜೆಯೊಂದಿಗೆ ಹಬ್ಬ ಮುಕ್ತಾಯಗೊಳ್ಳಲಿದೆ.