ಕೂಡಿಗೆ, ಮಾ. 21 : ಕೂಡುಮಂಗಳೂರು ಗ್ರಾ. ಪಂ. ವ್ಯಾಪ್ತಿಯ ಸುಂದರನಗರ ಅಕ್ರಮವಾಗಿ ಗೋ ಮಾಂಸ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಗ್ರಾಮಸ್ಥರು ಹಿಡಿದು ಗ್ರಾಮಾಂತರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ಪಿರಿಯಾಪಟ್ಟಣ ತಾಲೂಕು ಹಡಗನಳ್ಳಿ ಗ್ರಾಮದ ಅಸ್ಲಾಂ ಎಂಬಾತ ತನ್ನ ಸ್ಕೂಟರ್‍ನಲ್ಲಿ (ಕೆಎ.45.ಆರ್.5492) ಸುಮಾರು 40 ಕೆ.ಜಿಯಷ್ಟು ಗೋ ಮಾಂಸದ ಒಂದೊಂದು ಕೆ.ಜಿ. ಪ್ಯಾಕೇಟ್ ಮಾಡಿ ಮನೆಗಳಿಗೆ ಮಾರಾಟ ಮಾಡುತ್ತಿದ್ದ ಸಂದರ್ಭ ಸುಂದರನಗರದ ನಿವಾಸಿಗಳು ಮಾಂಸ ಮತ್ತು ಸ್ಕೂಟರ್ ಸಮೇತ ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.