ಸೋಮವಾರಪೇಟೆ,ಮಾ.21: ಹಾಕಿಯ ತವರಾದ ಕೊಡಗಿನಲ್ಲಿ ಈ ಬಾರಿ ಏಪ್ರಿಲ್‍ನಲ್ಲಿ ನಡೆಯುವ ಕೊಡವ ಕುಟುಂಬಗಳ ನಡುವಿನ ಹಾಕಿ ಉತ್ಸವದ ಕುರಿತು ಕುಲ್ಲೇಟಿರ ಕುಟುಂಬಸ್ಥರು ಪಟ್ಟಣದಲ್ಲಿ ರೋಡ್ ಶೋ ನಡೆಸಿದರು.

ನಾಪೋಕ್ಲುವಿನಲ್ಲಿ ಪಂದ್ಯಾಟ ನಡೆಸುವ ಕುರಿತು ಮಾಹಿತಿ, ಇದುವರೆಗೆ ಕೊಡವ ಕುಟುಂಬಗಳು ನಡೆಸಿಕೊಂಡು ಬರುತ್ತಿದ್ದ ಉತ್ಸವದ ವಿಶೇಷತೆ ಮತ್ತು ಅಂತರಾಷ್ಟ್ರೀಯ ಹಾಕಿ ತಂಡಕ್ಕೆ ಕೊಡಗಿನಿಂದ ಪ್ರತಿನಿಧಿಸಿರುವ ಹಾಕಿ ಆಟಗಾರರ ಪರಿಚಯ ಮತ್ತು ಕುಲ್ಲೇಟಿರ ಕುಟುಂಬದ ಹಿನ್ನೆಲೆ ಕುರಿತು ತೆರೆದ ವಾಹನದಲ್ಲಿ ಸ್ಲೈಡ್ ಶೋ ಮೂಲಕ ಮಾಹಿತಿ ನೀಡಿದರು.

ಈ ಸಂದರ್ಭ ಹಾಕಿ ಉತ್ಸವ ಸಮಿತಿಯ ಅಧ್ಯಕ್ಷ ಕುಲ್ಲೇಟಿರ ಶಂಭು ಮಂದಪ್ಪ, ಕಾರ್ಯದರ್ಶಿ ಅಜಿತ್ ನಾಣಯ್ಯ ಮತ್ತಿತರರು ಇದ್ದರು.