ಈಶ್ವರ ದೇವರ ಉತ್ಸವ

ವೀರಾಜಪೇಟೆಯ ಮಲೆತಿರಿಕೆ ಬೆಟ್ಟದಲ್ಲಿರುವ ಈಶ್ವರ ದೇವಸ್ಥಾನದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಮಲೆ ಮಹಾದೇಶ್ವರ ಉತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.

ಉತ್ಸವ ಮೂರ್ತಿಗೆ ಇಲ್ಲಿನ ಜೈನರ ಬೀದಿಯ ಬಸವೇಶ್ವರ ದೇವಸ್ಥಾನ, ಗಡಿಯಾರ ಕಂಬದ ಬಳಿ ಹಾಗೂ ದೇವಾಂಗ ಬೀದಿಯ ಚೌಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು.

ದೈವ ಕೋಲ

ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ಕುಡೆಕಲ್ಲು ಐನ್‍ಮನೆಯಲ್ಲಿ ತಾ. 24, 25 ಮತ್ತು 26 ರಂದು ಮೂರು ದಿನಗಳ ವಿಷ್ಣುಮೂರ್ತಿ ಮತ್ತು ಉಪದೈವಗಳ ಕೋಲ ಕಾರ್ಯಕ್ರಮ ನಡೆಯಲಿದೆ. ತಾ. 24 ರಂದು ಶ್ರೀ ವೆಂಕಟರಮಣ ದೇವರ ಹರಿಸೇವೆ ನಡೆಯಲಿದೆ.