ಮಡಿಕೇರಿ, ಮಾ.20 : ಕೊಡಗು ಜಿಲ್ಲೆಯ ವಿರಾಜಪೇಟೆಯ ಅರ್ಜಿ ಗ್ರಾಮ ಮತ್ತು ಸೋಮವಾರಪೇಟೆಯ ಕೊಡ್ಲಿಪೇಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 2018-19ನೇ ಸಾಲಿನ 6ನೇ ತರಗತಿ ಪ್ರವೇಶಾತಿಗಾಗಿ ಅಲ್ಪಸಂಖ್ಯಾತ ಮುಸ್ಲಿಂ, ಕ್ರಿಶ್ಚಿಯನ್, ಶಿಖ್, ಪಾಸಿ, ಜೈನ್, ಬೌದ್ಧ ಸಮುದಾಯದ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿಗಳನ್ನು ಸಂಬಧಿಸಿದ ವಸತಿ ಶಾಲೆಯಿಂದ ಹಾಗೂ ಈ ಕೆಳಕಂಡ ಕಚೇರಿಗಳಿಂದ ಏಪ್ರಿಲ್ 20ರೊಳಗಾಗಿ ಸಲ್ಲಿಸಬೇಕು ಹೆಚ್ಚಿನ ವಿವರಗಳಿಗಾಗಿ ತಿತಿತಿ.goಞಜom.ಞಚಿಡಿ.ಟಿiಛಿ.iಟಿ ಇಲಾಖಾ ವೆಬ್ ಸೈಟ್‍ನಲ್ಲಿ ಪಡೆಯಬಹುದು ಹಾಗೂ ತಾಲೂಕು ಮಾಹಿತಿ ಕೇಂದ್ರ ತಾಲೂಕು ಪಂಚಾಯತಿ ಕಚೇರಿ ಕಟ್ಟಡ, ಪೊನ್ನಂಪೇಟೆ, ವೀರಾಜಪೇಟೆ ತಾಲೂಕು ಮಾ.ಸಂ 9900731037 ಜಿಲ್ಲಾ ಮಾಹಿತಿ ಕೇಂದ್ರ ಡಿ.ದೇವರಾಜ ಅರಸು ಭವನ ಮಡಿಕೇರಿ ಮೊ.ಸಂ.8277560683, ತಾಲೂಕು ಮಾಹಿತಿ ಕೇಂದ್ರ ತಾಲೂಕು ಪಂಚಾಯಿತಿ ಕಚೇರಿ ಕಟ್ಟಡ ಸೋಮವಾರಪೇಟೆ, ಸೋಮವಾರಪೇಟೆ ತಾಲೂಕು ಮೊ. 9148604400, 8548068519 ಮಾಹಿತಿಯನ್ನು ಪಡೆದು ಸದುಪಯೋಗ ಪಡೆದುಕೊಳ್ಳುವಂತೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಕೆ.ವಿ.ಸುರೇಶ್ ತಿಳಿಸಿದ್ದಾರೆ.