ಶನಿವಾರಸಂತೆ, ಮಾ. 20: ಪಟ್ಟಣದ ಕ್ಲಬ್‍ವೊಂದರಲ್ಲಿ ಜೂಜಾಡುತ್ತಿದ್ದ ಐವರನ್ನು ಬಂಧಿಸಿದ ಪೊಲೀಸರು ಕಣದಲ್ಲಿ ಪಣಕ್ಕಿಟ್ಟಿದ್ದ ರೂ. 12,860 ನಗದನ್ನು ವಶಪಡಿಸಿಕೊಂಡಿದ್ದಾರೆ. ಅಂಗವಿಕಲರ ಕ್ಷೇಮಾಭಿವೃದ್ಧಿ ಕ್ಲಬ್‍ನಲ್ಲಿ ಜೂಜಾಟ ನಡೆಯುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಅನ್ವಯ ಪೊಲೀಸರು ನೂತನ ಪಿಎಸ್‍ಐ ಆನಂದ್ ನೇತೃತ್ವದಲ್ಲಿ ಧಾಳಿ ನಡೆಸಿದ್ದರು. ಪ್ರಕರಣ ದಾಖಲಿಸಿ ನಂತರ ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದರು.