ಸಿದ್ದಾಪುರ, ಮಾ. 20: ಇತ್ತೀಚೆಗೆ ಪಾಲಿಬೆಟ್ಟ ಸಮೀಪದ ಚೆನ್ನಯ್ಯನಕೋಟೆ ಗ್ರಾಮದಲ್ಲಿ ಕಾಡಾನೆ ಧಾಳಿಗೆ ಸಿಲುಕಿ ಮೃತಪಟ್ಟ ಕಾರ್ಮಿಕ ರುದ್ರಪ್ಪ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ ರೂ. 2 ಲಕ್ಷದ ಪರಿಹಾರವನ್ನು ಅರಣ್ಯ ಇಲಾಖಾಧಿಕಾರಿಗಳು ನೀಡಿದರು.

ಬಾಡಗ-ಬಾಣಂಗಾಲ ಗ್ರಾಮದ ಸಿ.ಟಿ. ಪೊನ್ನಪ್ಪ ಎಂಬವರ ಕಾಫಿ ತೋಟದ ಕಾರ್ಮಿಕ ರುದ್ರಪ್ಪ ಎಂಬವರು ಇತ್ತೀಚೆಗೆ ಸಂಜೆ ಅಂಗಡಿಗೆ ತೆರಳಿ ಮನೆಗೆ ಬರುವ ಸಂದರ್ಭ ಒಂಟಿ ಸಲಗವೊಂದು ರಸ್ತೆ ಮಧ್ಯದಲ್ಲಿ ರುದ್ರಪ್ಪ ಮೇಲೆ ಧಾಳಿ ನಡೆಸಿ ಸೊಂಡಿಲಿನಿಂದ ಎತ್ತಿ ಎಸೆದು ಸಾಯಿಸಿದ ಘಟನೆ ನಡೆದಿತ್ತು. ಈ ಹಿನ್ನೆಲೆ ಮೃತನ ಕುಟುಂಬಕ್ಕೆ ಅರಣ್ಯ ಇಲಾಖೆಯ ವತಿಯಿಂದ ರೂ. 2 ಲಕ್ಷ ಪರಿಹಾರ ಧನದ ಚೆಕ್ ಅನ್ನು ಮೃತನ ಸ್ವಗ್ರಾಮ ಕೆ.ಆರ್. ನಗರ ತಾಲೂಕಿನ ಗುಮ್ಮನ ಹಳ್ಳಿ ಗ್ರಾಮಕ್ಕೆ ತಿತಿಮತಿ ವಲಯ ಅರಣ್ಯಾಧಿಕಾರಿ ಅಶೋಕ್ ಹಾಗೂ ಉಪ ವಲಯ ಅರಣ್ಯಾಧಿಕಾರಿ ಶ್ರೀನಿವಾಸ್ ತೆರಳಿ ವಿತರಿಸಿದರು. ಉಳಿದ 3 ಲಕ್ಷ ಪರಿಹಾರವನ್ನು ಸಧ್ಯದಲ್ಲೇ ನೀಡಲಾಗುವದೆಂದು ಇಲಾಖಾಧಿಕಾರಿಗಳು ತಿಳಿಸಿದ್ದಾರೆ.