ಕೂಡಿಗೆ ಸಮೀಪದ ಶ್ರೀ ರಾಮಲಿಂಗೇಶ್ವರ ದೇವಾಲಯ ಸಮಿತಿಯ ವತಿಯಿಂದ ಹಮ್ಮಿಕೊಂಡಿರುವ ಶೀ ರಾಮಲಿಂಗೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ವಾರ್ಷಿಕ ಜಾತ್ರೆಗೆ ಬ್ರಹ್ಮರಥದ ಸಿಂಗಾರದ ಸಿದ್ಧತೆ ಭರದಿಂದ ನಡೆಯುತ್ತಿದೆ.
ತಾ. 23 ರಿಂದ 29 ರವರೆಗೆ ಶ್ರೀ ರಾಮಲಿಂಗೇಶ್ವರ ಸ್ವಾಮಿಯ ವಿಶೇಷ ಪೂಜೆ ನಡೆಯಲಿದ್ದು, ತಾ. 25 ರಂದು ನಡೆಯುವ ಬ್ರಹ್ಮರಥೋತ್ಸವಕ್ಕೆ ರಥದ ಸಿದ್ಧತೆಯಲ್ಲಿ ಹಾಗೂ ರಥದ ಜೋಡಣೆ ಕಾರ್ಯದಲ್ಲಿ ಸಮಿತಿಯ ಸದಸ್ಯರುಗಳು ತೊಡಗಿದ್ದಾರೆ.
ಈ ಸಂದರ್ಭ ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಎನ್. ಸುರೇಶ್, ಮಾಜಿ ಅಧ್ಯಕ್ಷರುಗಳಾದ ಕೆ.ಸಿ. ನಂಜುಂಡಸ್ವಾಮಿ, ಉಪಾಧ್ಯಕ್ಷ ಕೆ.ಕೆ. ಮಂಜುನಾಥ್, ಕಾರ್ಯದರ್ಶಿ ಶೇಷಾಚಲ, ಸಹ ಕಾರ್ಯದರ್ಶಿ ಮಹೇಶ್ ಕುಮಾರ್, ಕಾರ್ಯಾಧ್ಯಕ್ಷ ಮಾದವ, ಸಮಿತಿಯ ನಿರ್ದೇಶಕರು ಇದ್ದರು.