*ಗೋಣಿಕೊಪ್ಪಲು: ಇಲ್ಲಿನ ಕೂರ್ಗ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಗೆ ಬಿಟ್ಟಂಗಾಲದ ಅಡ್ವೆಂಚರ್ ಸ್ಪೋರ್ಟ್ರ್ಸ್ ಕ್ಲಬ್ ವತಿಯಿಂದ ಸಾಹಸಮಯ ಕ್ರೀಡಾ ತರಬೇತಿ ನೀಡಲಾಯಿತು.
ಅಂತರ್‍ರಾಷ್ಟ್ರೀಯ ಯುವ ಪುರಸ್ಕಾರದ ಅಂಗವಾಗಿ ಎರಡು ದಿನಗಳ ಕಾಲ ನಡೆದ ಶಿಬಿರದಲ್ಲಿ ಪಾಲ್ಗೊಂಡಿದ್ದ 50 ವಿದ್ಯಾರ್ಥಿಗಳಿಗೆ ಜಿಪ್ ಲೈನಿಂಗ್, ರ್ಯಾಪ್ಲಿಂಗ್, ರೋಪ್ ಕ್ಲೈಮಿಂಗ್ ಬಗ್ಗೆ ಅನುಭವಿ ತಜ್ಞರಿಂದ ತರಬೇತಿ ಲಭಿಸಿತು. ಶಿಬಿರದ ಆಯೋಜಕ ಚಂಗಪ್ಪ ಅವರ ನೇತೃತ್ವದಲ್ಲಿ ಕುಂದ ಬೆಟ್ಟಕ್ಕೆ ಚಾರಣ ನಡೆಯಿತು. ಬೆಟ್ಟದ ಮೇಲೆ ಇರುವ ಬೃಹತ್ ಕಲ್ಲು ಬಂಡೆಯ ಮೇಲಿಂದ 100 ಅಡಿ ಆಳಕ್ಕೆ ಇಳಿಯುವದು ಮತ್ತು ಮೇಲೇರುವ ಸಾಹಸದ ಬಗ್ಗೆಯು ತರಬೇತಿ ಪಡೆದುಕೊಂಡರು. ಶಿಕ್ಷಕಿ ಟೀನಾ ಮಾಚಯ್ಯ, ಪ್ರಾಂಶುಪಾಲ ಬೆನ್ನಿ ಕುರಿಯಕೋಸ್ ಇದ್ದರು.