ಮಡಿಕೇರಿ, ಮಾ. 19: ಸಣ್ಣ ಪುಲಿಕೋಟುವಿನಲ್ಲಿರುವ ಶ್ರೀಮಂದತಿರಿಕೆ ಭಗವತಿ ದೇವಸ್ಥಾನ ಸಮಿತಿ ವತಿಯಿಂದ ತಾ. 20 ರಿಂದ 27ರ ವರೆಗೆ ಶ್ರೀ ಭಗವತಿ ದೇವಿ ಮತ್ತು ಶಾಸ್ತಾವು ದೇವರ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ರಹ್ಮಕಲಶೋತ್ಸವದ ಸ್ವಾಗತ ಸಮಿತಿಯ ಅಧ್ಯಕ್ಷರಾದ ಕುಯ್ಯಮುಡಿ ಮನೋಜ್ ಕುಮಾರ್ ಎಂಟು ದಿನಗಳ ಕಾಲ ಶ್ರೀತಲಕಾವೇರಿ ಪ್ರಶಾಂತ್ ಆಚಾರ್ಯ ಅವರ ನೇತೃತ್ವದಲ್ಲಿ ನಡೆಯುವ ವಿವಿಧ ಧಾರ್ಮಿಕ ಕಾರ್ಯಗಳ ಕುರಿತು ಮಾಹಿತಿ ನೀಡಿದರು.
ತಾ. 20 ರಂದು ಸಂಜೆ 4.30 ರಿಂದ ರಾತ್ರಿ 9 ಗಂಟೆಯವರೆಗೆ ಪ್ರಸಾದ ಪರಿಗ್ರಹಣ, ಸಾಮೂಹಿಕ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಋತ್ವಿಗೌವರಣ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಅಂಕುರ ಅರೋಪಣ, ಪ್ರಾಸಾದಶುದ್ಧಿ, ಸಪ್ತಶುದ್ಧಿ, ಅಸ್ತ್ರಕಲಶ ಪೂಜೆ, ರಾಕ್ಷೋಘ್ನ ಹೋಮ, ವಾಸ್ತು ಪೂಜೆ, ವಾಸ್ತು ಹೋಮ, ದಿಕ್ಪಾಲಕ ಬಲಿ, ಮಹಾಪೂಜೆ ಏರ್ಪಡಿಸಲಾಗಿದ್ದು, ತಾ. 21 ರಂದು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯ ವರೆಗೆ ಸ್ವಸ್ತಿ ಪುಣ್ಯಾಹವಾಚನ, ಗಣಪತಿ ಹೋಮ, ಕ್ಷಾಳನಾದಿ ಚತುಃಶುದ್ಧಿ, ಧಾರಾ, ಪಂಚಗವ್ಯ, ಪಂಚಕ, ಶಾಂತಿ, ಪ್ರಾಯಶ್ಚಿತ್ತ ಹೋಮಗಳು, ಅಂಕುರ ಪೂಜೆ, ಹೋಮಕಲಶಾಭಿಷೇಕ, ಅನುಜ್ಞಾ ಕಲಶ ಪೂಜೆ, ಅನುಜ್ಞಾ ಕಲಶಾಭಿಷೇಕ, ಪ್ರಾರ್ಥನೆ, ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಅಂದು ಸಂಜೆ 4.30 ರಿಂದ ರಾತ್ರಿ 9 ಗಂಟೆಯ ತನಕ ಅಂಕುರ ಪೂಜೆ, ದುರ್ಗಾ ಪೂಜೆ, ಮಂಟಪ ಸಂಸ್ಕಾರ, ಮಂಡಲ ರಚನೆ, ರಾತ್ರಿ ಪೂಜೆ ನಡೆಯಲಿದೆ.
ತಾ. 22 ರಂದು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯ ತನಕ ಸ್ವಸ್ತಿ ಪುಣ್ಯಾಹವಾಚನ, ಗಣಪತಿ ಹೋಮ, ಅಗ್ನಿ ಸಂಸ್ಕಾರ, ಸಂಹಾರ ತತ್ವ, ಕಲಶ ಪೂಜೆ, ಸಂಹಾರ ತತ್ವಹೋಮ, ಕುಂಭೇಶ-ಕರ್ಕರಿ ಕಲಶ ಪೂಜೆ, ಶಯ್ಯಾ ಪೂಜೆ, ವಿದ್ಯೇಶ ಕಲಶ ಪೂಜೆ, ಸಂಹಾರ ತತ್ವ ಕಲಶಾಭಿಷೇಕ, ಜೀವೋದ್ವಾಸನೆ, ಜೀವ ಕಲಶ ಶಯ್ಯಾನಯನ, ಅಂಕುರ ಪೂಜೆ, ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದ್ದು, ಅಂದು ಸಂಜೆ 5 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ವಿವಿಧ ಪೂಜೆಗಳು ನಡೆಯಲಿದೆ.
ತಾ. 23 ರಂದು ಬೆಳಿಗ್ಗೆ 5 ಗಂಟೆಯಿಂದ ಸ್ವಸ್ತಿ ಪುಣ್ಯಾಹವಾಚನ, ಗಣಹೋಮ, ಪ್ರಾಸಾದ ಪ್ರತಿಷ್ಠೆ, ನಡೆಯಲಿದ್ದು, ಬೆಳಿಗ್ಗೆ 7.02ಕ್ಕೆ ಮಂದತಿರಿಕೆ ಶ್ರೀ ಭಗವತಿ ಮತ್ತು ಶಾಸ್ತವು ದೇವರ ಪುನರ್ ಪ್ರತಿಷ್ಠೆ, ಅಷ್ಟಬಂಧ ಪ್ರತಿಷ್ಠೆ, ಜೀವ ಕಲಶಾಭಿಷೇಕ, ಪ್ರತಿಷ್ಠಾ ಪೂಜೆ, ಮಹಾಪೂಜೆ, ಪ್ರತಿಷ್ಠಾ ಬಲಿ, ಪ್ರಾರ್ಥನೆ, ನಿತ್ಯ ವಿಧಿವಿಧಾನ ಸಂಕಲ್ಪ, ಅಂಕುರ ಪೂಜೆ ನಡೆಯಲಿದ್ದು, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ ನಡೆಯಲಿದೆ. ಅಂದು ಸಂಜೆ 4.30 ರಿಂದ ರಾತ್ರಿ 9 ಗಂಟೆಯವರೆಗೆ ದಿಕ್ಪಾಲಕ ಪ್ರತಿಷ್ಠೆ, ಮಾತೃಕಾ ಪೀಠ ಪ್ರತಿಷ್ಠೆ, ನಿರ್ಮಾಲ್ಯಧಾರಿ ಪ್ರತಿಷ್ಠೆ, ದುರ್ಗಾಪೂಜೆ, ಅಂಕುರ ಪೂಜೆ, ಮಹಾಪೂಜೆ ನಡೆಯಲಿದೆ ಎಂದರು.
ತಾ. 24 ರಂದು ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆಯ ವರೆಗೆ ಸ್ಪಸ್ತಿ ಪುಣ್ಯಾಹ ವಾಚನ, ಗಣಪತಿ ಹೋಮ, ಹಾಗೂ ಶಾಂತಿ ಮತ್ತು ಪ್ರಾಯಶ್ಚಿತ್ತ ಹೋಮಗಳು, ಮಹಾಬಲಿಪೀಠ ಪ್ರತಿಷ್ಠೆ ನಡೆಯಲಿದ್ದು, ಸಂಜೆ 4.30 ರಿಂದ ರಾತ್ರಿ 9 ಗಂಟೆಯ ವರೆಗೆ ಮಂಟಪ ಸಂಸ್ಕಾರ, ಕಲಶ ಮಂಡಲ ರಚನೆ, ಅಂಕುರ ಪೂಜೆ ದುರ್ಗಾ ಪೂಜೆ, ಮಹಾಪೂಜೆ ನಡೆಯಲಿದೆ. ಅಲ್ಲದೆ ತಾ. 25 ರಂದು ಬೆಳಿಗ್ಗೆ 6.30 ರಿಂದ ಮಧ್ಯಾಹ್ನ 12 ಗಂಟೆಯ ವರೆಗೆ ಪುಣ್ಯಾಹ ವಾಚನ, ಗಣಪತಿ ಹೋಮ, ತತ್ವ ಕಲಶ ಪೂಜೆ, ತತ್ವ ಹೋಮ, ಕಲಶಾಭಿಷೇಕ, ಮಹಾಪೂಜೆ, ಅಂಕುರ ಪೂಜೆ ನಡೆಯಲಿದೆ.
ಅಂದು ಸಂಜೆ 4 ಗಂಟೆಯಿಂದ ರಾತ್ರಿ 9 ಗಂಟೆಯ ವರೆಗೆ ಶ್ರೀ ಭಗವತಿ ದೇವರಿಗೆ ಬ್ರಹ್ಮ ಕಲಶ ಪೂಜೆ, ಪರಿಕಲಶ ಪೂಜೆ, ಬ್ರಹ್ಮ ಕಲಶಾಧಿವಾಸ, ಅಧಿವಾಸ ಹೋಮಗಳು, ಶಾಸ್ತಾವು ದೇವರಿಗೆ ಬ್ರಹ್ಮಕಲಶ ಪೂಜೆ ಅಧಿವಾಸ ಹೋಮ, ದುರ್ಗಾ ಪೂಜೆ, ಅಂಕುರ ಪೂಜೆ, ಮಹಾಪೂಜೆ ನಡೆಯಲಿದೆ.
ತಾ. 26 ರಂದು ಬೆಳಗ್ಗೆ 5 ಗಂಟೆಯಿಂದ ಪುಣ್ಯಾಹ ವಾಚನ, ಗಣಪತಿ ಹೋಮ ನಡೆಯಲಿದ್ದು, ಸಂಜೆ 6.50ಕ್ಕೆ ಶ್ರೀ ಭಗವತಿ ದೇವರಿಗೆ ಬ್ರಹ್ಮಕಲಶಾಭಿಷೇಕ ಮತ್ತು ಶ್ರೀ ಶಾಸ್ತವು ದೇವರಿಗೆ ಬ್ರಹ್ಮ ಕಲಾಶಾಭಿಷೇಕ ನಡೆಯಲಿದೆ ಅಲ್ಲದೆ 11.30 ಕ್ಕೆ ಮಹಾಪೂಜೆ, ಪಲ್ಲಪೂಜೆ, ಪ್ರಸಾದ ವಿನಿಯೋಗ, ಹಾಗೂ ಸಂಜೆ 5.30 ರಿಂದ ರಾತ್ರಿ 9 ಗಂಟೆಗೆಯ ವರೆಗೆ ಉತ್ಸವ ಬಲಿ, ಕಟ್ಟೆ ಪೂಜೆ, ಪೀಠಪೂಜೆ ನಡೆಯಲಿದೆ. ತಾ. 27 ರಂದು ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 11 ಗಂಟೆಯ ತನಕ ಪ್ರಾತಃ ಪೂಜೆ, ಸ್ಪಸ್ತಿ ಪುಣ್ಯಾಹ ವಾಚನ, ಗಣಪತಿ ಹೋಮ, ನವಕಲಶ ಪೂಜೆ, ಕಲಶಾಭಿಷೇಕ, ಮಹಾಪೂಜೆ, ಮಹಾಮಂತ್ರಾಕ್ಷತೆ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಕುಯ್ಯಮುಡಿ ಮನೋಜ್ ಕುಮಾರ್ ತಿಳಿಸಿದರು.
ಸಣ್ಣ ಪುಲಿಕೋಟು ಗ್ರಾಮದ ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿರುವ ಶ್ರೀಭಗವತಿ ದೇವಸ್ಥಾನವನ್ನು ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ಜೀಣೋದ್ಧಾರ ಮಾಡಲು ಯೋಜನೆ ರೂಪಿಸಲಾಗಿತ್ತು. ಇದೀಗ 30 ಲಕ್ಷ ರೂ. ವೆಚ್ಚದ ಕಾಮಗಾರಿ ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ದೇವಾಲಯ ಸಮಿತಿಯ ಅಧ್ಯಕ್ಷರಾದ ಪಟ್ಟಮಾಡ ಅಪ್ಪಣ್ಣ, ಕಾರ್ಯದರ್ಶಿ ಕುಂಡ್ಯನ ಚರಣ್, ಆರೋಗ್ಯ ಮತ್ತು ನೈರ್ಮಲ್ಯ ಸಮಿತಿಯ ಕುಯ್ಯಮುಡಿ ಎನ್.ಗಣೇಶ್ ಹಾಗೂ ಕೆ.ಪಿ.ಕಿಶೋರ್ ಉಪಸ್ಥಿತರಿದ್ದರು.