ಮಡಿಕೇರಿ, ಮಾ. 19: ಕೊಡಗು ಜಿಲ್ಲಾ ಕಾಂಗ್ರೆಸ್ ಚುನಾವಣಾ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಜಿಲ್ಲಾ ಅಧ್ಯಕ್ಷರನ್ನಾಗಿ ಜಿ.ಪಂ. ಸದಸ್ಯೆ ಸರಿತಾ ಪೂಣಚ್ಚ ಅವರು ನೇಮಕಗೊಂಡಿದ್ದಾರೆ. ಸಂಚಾಲಕರಾಗಿ ಎಸ್.ಎಂ. ಚಂಗಪ್ಪ, ಕಾರ್ಯದರ್ಶಿ ಯಾಗಿ ಎನ್. ಬಾಲಚಂದ್ರ ನಾಯರ್ ಅವರುಗಳು ಆಯ್ಕೆಯಾಗಿದ್ದಾರೆ. ವೀರಾಜಪೇಟೆ ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾಗಿ ಮತ್ರಂಡ ದಿಲ್ಲು, ಮಡಿಕೇರಿ ಕ್ಷೇತ್ರದ ಅಧ್ಯಕ್ಷರಾಗಿ ಸಿ.ಎಂ. ಲತೀಫ್, ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷರಾಗಿ ಜೇನು ಕುರುಬರ ಸೋಮಯ್ಯ, ವೀರಾಜಪೇಟೆ ಬ್ಲಾಕ್‍ಗೆ ಕುಟ್ಟಂಡ ಕೃಷ್ಣ, ನಾಪೋಕ್ಲು ಬ್ಲಾಕ್‍ಗೆ ಹೊಸೂರು ಸೂರಜ್, ಮಡಿಕೇರಿ ಬ್ಲಾಕ್‍ಗೆ ಪಾಪು ಸಣ್ಣಯ್ಯ, ಸೋಮವಾರಪೇಟೆ ಬ್ಲಾಕ್‍ಗೆ ಲಾರೆನ್ಸ್ ಅವರುಗಳು ಆಯ್ಕೆಗೊಂಡಿದ್ದಾರೆ. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಆದೇಶದ ಮೇರೆಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವು ಮಾದಪ್ಪ ಈ ಆಯ್ಕೆ ಮಾಡಿದ್ದಾರೆ.