ಮಡಿಕೇರಿ, ಮಾ. 19: ಚಿನ್ನ, ಬೆಳ್ಳಿ, ಪ್ಲಾಟಿನಂಗಳ ಶುದ್ಧತೆಯನ್ನು ಪರೀಕ್ಷಿಸುವ ಯಂತ್ರ ಅಳವಡಿಸಿರುವ ಬೆಳ್ವಾಯಿ ಗೋಲ್ಡ್ ಮಳಿಗೆ ಮಡಿಕೇರಿಯಲ್ಲಿ ಆರಂಭಗೊಂಡಿದೆ. ತಾ. 14 ರಂದು ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಮಳಿಗೆ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ನಿವೃತ್ತ ನಾಯಬ್ ಸುಬೇದಾರ್ ಟಿ.ಕೆ. ಪುರುಷೋತ್ತಮ ಆಚಾರ್ಯ, ಜಿಲ್ಲಾ ಚಿನ್ನ, ಬೆಳ್ಳಿ ವರ್ತಕರ ಸಂಘದ ಅಧ್ಯಕ್ಷ ಕೆ.ಕೆ. ಶ್ರೀನಿವಾಸ ಆಚಾರ್ಯ ಪಾಲ್ಗೊಂಡಿದ್ದರು. ಮಾಲೀಕ ಬಿ.ಸಿ. ಶ್ರೀಧರ್ ಆಚಾರ್ಯ ಹಾಗೂ ಸಹೋದರರು ನೂತನ ಯಂತ್ರಗಳ ಕುರಿತು ಮಾಹಿತಿ ನೀಡಿದರು.