ಸುಂಟಿಕೊಪ್ಪ, ಮಾ.19 : ರಸ್ತೆ ಕಾಮಗಾರಿಯಲ್ಲಿ ರಾಜಕೀಯ, ಕೆರೆಯಲ್ಲಿ ಆಕ್ರಮಗಣಿಗಾರಿಕೆ, ಕಾಡಾನೆ ಹಾವಳಿ, ಮರ ತೆರವುಗೊಳಿಸುವಲ್ಲಿ ಅರಣ್ಯ ಇಲಾಖೆಯ ನಿರಾಸಕ್ತಿ, ವ್ಯಕ್ತಿಯೋರ್ವನಿಂದ ಮಹಿಳೆಗೆ ಕಿರುಕುಳ, ಸೆಸ್ಕ್ ಇಲಾಖೆಯ ಇಂಜಿನಿಯರ್‍ಗೆ ಅರಣ್ಯ ಇಲಾಖೆಯಿಂದ ಮೊಕದ್ದಮೆ ಇವೆ ಮೊದಲಾದ ಗಂಭೀರ ವಿಚಾರಗಳ ಬಗ್ಗೆ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿಯ ಗ್ರಾಮಸಭೆಯಲ್ಲಿ ಪ್ರಸ್ತಾಪವಾಯಿತು. ನಾಕೂರು ಶಿರಂಗಾಲ ಪಂಚಾಯಿತಿಯ ಗ್ರಾಮ ಸಭೆಯು ಕಾನ್‍ಬೈಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾ.ಪಂ.ಅಧ್ಯಕ್ಷೆ ವಿ.ಆರ್.ರಂಜನಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮಾತಿನ ಚಕಮಕಿ’ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಲ್ಲಿ ನಾಕೂರಿನಿಂದ ಬಸವನಹಳ್ಳಿಗೆ ರಸ್ತೆ ಕಾಮಗಾರಿ ನಡೆಯುತ್ತಿದ್ದು ಎಸ್.ಪಿ.ನಿಂಗಪ್ಪ ಅವರು ರಸ್ತೆ ಅಗಲೀಕರಣಕ್ಕೆ ಬೇಲಿ ತೆರವುಗೊಳಿಸಿಲ್ಲ ಎಂದು ಜಿ.ಪಂ.ಸದಸ್ಯೆ ಕುಮುದಾ ಧರ್ಮಪ್ಪ ಹೇಳಿದಾಗ ಸಭೆಯಲ್ಲಿದ್ದ ನಿಂಗಪ್ಪ ಅವರು ಇದು ಕೇಂದ್ರ ಸರಕಾರದಿಂದ ಶಾಸಕರಾದ ರಂಜನ್ ಅವರ ಪರಿಶ್ರಮದಿಂದ 9ಕೋಟಿ ಅನುದಾನದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ.
ನೀವು ಗ್ರಾಮದ ಇನ್ನಷ್ಟು ಅಭಿವೃದ್ಧಿಗೆ ಹಣ ತನ್ನಿ ಹಾಗೆಯೇ ನಾಕೂರು ಶಿರಂಗಾಲ ಪಂಚಾಯಿತಿ ಸದಸ್ಯರು ಅನುದಾನ ಕಲ್ಪಿಸಿಕೊಡಿ ಎಂದು ಏರು ಧ್ವನಿಯಲ್ಲಿ ಹೇಳಿದಾಗ ಜಿ.ಪಂ.ಸದಸ್ಯರು ಪ್ರತಿ ವಾಗ್ದಾಳಿ ನಡೆಸಿದರು. ಇದರಿಂದ ಸಭೆ ಗೊಂದಲದ ಗೂಡಾಯಿತು.
ಸದಸ್ಯ ಕೆ.ಪಿ.ವಸಂತ್ ಮಾತನಾಡಿ ಇಲ್ಲಿ ರಾಜಕೀಯ ಚರ್ಚೆಬೇಡ ಅಭಿವೃದ್ಧಿ ಪರ ಚರ್ಚಿಸಿ ಗ್ರಾಮದ ಅಭಿವೃದ್ದಿಗೆ ಎಲ್ಲಾರೂ ಕೈಜೋಡಿಸುವ ಎಂದು ಹೇಳಿದರು. ಒಂದು ಹಂತದಲ್ಲಿ ಜಿ.ಪಂ.ಸದಸ್ಯೆ
ಅಗಲೀಕರಣಕ್ಕೆ ಬೇಲಿ ತೆರವುಗೊಳಿಸಿಲ್ಲ ಎಂದು ಜಿ.ಪಂ.ಸದಸ್ಯೆ ಕುಮುದಾ ಧರ್ಮಪ್ಪ ಹೇಳಿದಾಗ ಸಭೆಯಲ್ಲಿದ್ದ ನಿಂಗಪ್ಪ ಅವರು ಇದು ಕೇಂದ್ರ ಸರಕಾರದಿಂದ ಶಾಸಕರಾದ ರಂಜನ್ ಅವರ ಪರಿಶ್ರಮದಿಂದ 9ಕೋಟಿ ಅನುದಾನದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ.
ನೀವು ಗ್ರಾಮದ ಇನ್ನಷ್ಟು ಅಭಿವೃದ್ಧಿಗೆ ಹಣ ತನ್ನಿ ಹಾಗೆಯೇ ನಾಕೂರು ಶಿರಂಗಾಲ ಪಂಚಾಯಿತಿ ಸದಸ್ಯರು ಅನುದಾನ ಕಲ್ಪಿಸಿಕೊಡಿ ಎಂದು ಏರು ಧ್ವನಿಯಲ್ಲಿ ಹೇಳಿದಾಗ ಜಿ.ಪಂ.ಸದಸ್ಯರು ಪ್ರತಿ ವಾಗ್ದಾಳಿ ನಡೆಸಿದರು. ಇದರಿಂದ ಸಭೆ ಗೊಂದಲದ ಗೂಡಾಯಿತು.
ಸದಸ್ಯ ಕೆ.ಪಿ.ವಸಂತ್ ಮಾತನಾಡಿ ಇಲ್ಲಿ ರಾಜಕೀಯ ಚರ್ಚೆಬೇಡ ಅಭಿವೃದ್ಧಿ ಪರ ಚರ್ಚಿಸಿ ಗ್ರಾಮದ ಅಭಿವೃದ್ದಿಗೆ ಎಲ್ಲಾರೂ ಕೈಜೋಡಿಸುವ ಎಂದು ಹೇಳಿದರು. ಒಂದು ಹಂತದಲ್ಲಿ ಜಿ.ಪಂ.ಸದಸ್ಯೆ ತೋಟಗಳಲ್ಲಿ ಆಕಸ್ಮಿಕ ವಿದ್ಯುತ್ ತಂತಿ ತುಂಡಾಗಿ ಬಿದ್ದು, ಕಾಡಾನೆ ಸಾವಿಗೀಡಾಗಿದ್ದಕ್ಕೆ ಅರಣ್ಯ ಅಧಿಕಾರಿಗಳು ಸೆಸ್ಕ್ ಇಂಜಿನಿಯರ್ ಮೇಲೆ ಮೊಕದ್ದಮೆ ದಾಖಲಿಸಿ ನ್ಯಾಯಾಲಯದಲ್ಲಿ ದಾವೆ ಹೂಡುತ್ತಾರೆ ಇದರಿಂದ ಕರ್ತವ್ಯ ನಿರ್ವಹಿಸಲು ಆಗುತ್ತಿಲ್ಲ ಎಂದು ಸೆಸ್ಕ್ ಇಂಜಿನೀಯರ್ ರಮೇಶ್ ಅವಲತ್ತುಕೊಂಡರು.
ತನಗೆ ಗ್ರಾಮದ ಅಭಿಜಿತ್ ಎಂಬಾತ ಕಿರುಕುಳ ನೀಡುತ್ತಿದ್ದಾನೆ ಪೊಲೀಸರಿಗೆ ದೂರು ನೀಡಿದರೆ ನನ್ನ ಮೇಲೆಯೇ ಮೊಕದ್ದಮೆ ಹಾಕಿ ದಂಡ ಕಟ್ಟಿಸಿದ್ದಾರೆ ಪೊಲೀಸರು ನ್ಯಾಯ ಕೊಡಬೇಕೆಂದು ಎಂದು ಮಹಿಳೆಯೋರ್ವರು ಹೇಳಿದರು. ತಾ.ಪಂ.ಸದಸ್ಯೆ ಹೆಚ್.ಡಿ.ಮಣಿ ಮಾತನಾಡಿ ತಾಲೂಕು ಪಂಚಾಯಿತಿ ಅನುದಾನ ಅಲ್ಪಪ್ರಮಾಣದಲ್ಲಿ ದೊರೆಯುತ್ತಿದ್ದು ಮೂರು ಪಂಚಾಯಿತಿಗಳಿಗೂ ಸಮಾನವಾಗಿ ಹಂಚಬೇಕಾಗಿದೆ ಎಂದರು.
ಈ ಸಭೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಂದೀಶ್, ಗ್ರಾ.ಪಂ.ಉಪಾಧ್ಯಕ್ಷೆ ಯಶೋಧ, ಸದಸ್ಯರುಗಳಾದ ವಸಂತ, ಬಿಜು, ಅಂಬೇಕಲ್ ಚಂದ್ರಶೇಖರ್, ಸತೀಶ, ರಾಣಿಚೆನ್ನಮ್ಮ, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.