ಮಡಿಕೇರಿ, ಮಾ. 19: ಇಂದು ಬೆಳಗ್ಗಿನ ಜಾವ ಮಂಗಳೂರಿನಿಂದ ಹಾಸನಕ್ಕೆ ತೆರಳುತ್ತಿದ್ದ ಕಂಟೇನರ್ (ಕೆಎ-19 ಎಬಿ 3939) ಮೈಸೂರು ಹೆದ್ದಾರಿಯ ಬೋಯಿಕೇರಿ ಕೆಳಗಿನ ತಿರುವಿನಲ್ಲಿ ಮಗುಚಿಕೊಂಡಿದೆ. ಚಾಲಕ ಜಿತೇಂದ್ರ ಕುಮಾರ್ ಎಂಬವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಯಾವದೇ ಪ್ರಾಣಹಾನಿ ಸಂಭವಿಸಿಲ್ಲ. ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.