ಕುಶಾಲನಗರ, ಮಾ. 16: ಕೆಸರಿನಲ್ಲಿ ಸಿಲುಕಿಕೊಂಡು ನಿತ್ರಾಣಗೊಂಡಿದ್ದ ಕಾಡಾನೆಯನ್ನು ಕೆರೆಯಿಂದ ಮೇಲೆತ್ತುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದ್ದರೂ ಆನೆ ಸಾವು ಬದುಕಿನ ನಡುವೆ ಹೋರಾಡುತ್ತಿರುವ ದೃಶ್ಯ ಕಂಡುಬಂದಿದೆ. ನಂಜರಾಯಪಟ್ಟಣ ಸಮೀಪದ ರಂಗಸಮುದ್ರ ಬಳಿ ಅಡಿಕೆ ತೋಟವೊಂದರ ತೋಡಿನಲ್ಲಿ ಸಿಲುಕಿಕೊಂಡ ಆನೆ ಅಸ್ವಸ್ಥ ಸ್ಥಿತಿಯಲ್ಲಿದ್ದು ವನ್ಯಜೀವಿ ತಜ್ಞರು ಆರೈಕೆಯಲ್ಲಿ ತೊಡಗಿದ್ದಾರೆ.